ಪಶ್ಚಿಮಬಂಗಾಳ: 100ಕ್ಕೂ ಅಧಿಕ ಕಚ್ಚಾ ಬಾಂಬ್ ವಶ

Update: 2019-07-07 17:53 GMT

ಕೋಲ್ಕತಾ, ಜು. 7: ಪಶ್ಚಿಮಬಂಗಾಳದಲ್ಲಿ ಪೊಲೀಸರು 100ಕ್ಕೂ ಅಧಿಕ ಸಜೀವ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರ ಸಂಗ್ರಹಿಸಿದ ಆರೋಪದಲ್ಲಿ 9 ಮಂದಿಯನ್ನು ಬಂಧಿಸಿದ್ದಾರೆ.

ಕಳೆದ 10 ದಿನಗಳ ಒಳಗೆ ಮಲ್ಲಾರ್‌ಪುರ ಹಾಗೂ ಲಾಭ್‌ ಪುರದಲ್ಲಿ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿದ ಬಳಿಕ ರಾಜಕೀಯ ಹಿಂಸಾಚಾರದ ಇತಿಹಾಸ ಹೊಂದಿರುವ ಬಿರ್ಭೂಮ್ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರಿಕೆ ವಹಿಸಿದ್ದಾರೆ.

ಈ ಎರಡು ಸ್ಫೋಟಗಳು ಖಾಲಿ ಕಟ್ಟಡದಲ್ಲಿ ಸಂಭವಿಸಿರುವುದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.

‘‘ನಾವು ಬಿರ್ಭೂಮ್‌ನ ವಿವಿಧ ಪ್ರದೇಶಗಳಿಂದ 100ಕ್ಕೂ ಅಧಿಕ ಸಜೀವ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಬಾಂಬ್ ನಿಷ್ಕ್ರಿಯ ದಳ ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಸಫಲವಾಗಿದೆ. ಜಿಲ್ಲೆಯಾದ್ಯಂತ ರಾತ್ರಿ ನಡೆಸಲಾದ ದಾಳಿಯಲ್ಲಿ ಕಾನೂನು ಬಾಹಿರವಾಗಿ 6 ಶಸ್ತ್ರಾಸ್ತ ಹೊಂದಿದ ಆರೋಪದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.’’ ಎಂದು ಬಿರ್ಭೂಮ್ ಪೊಲೀಸ್ ಅಧೀಕ್ಷಕ ಶ್ಯಾಂ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News