ಗೋಪಾಲ ಭಂಡಾರಿ ತತ್ವಾದರ್ಶ ಪಾಲಿಸಬೇಕು: ಸೊರಕೆ

Update: 2019-07-08 12:47 GMT

ಕಾಪು: ನಿಷ್ಠಾವಂತ ಕಾಂಗ್ರೆಸ್ ನಾಯಕರಾಗಿದ್ದ ದಿ. ಎಚ್. ಗೋಪಾಲ ಭಂಡಾರಿ ಯವರ ತತ್ವಾದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಎಂದು ಕಾಂಗ್ರೆಸ್ ಮುಖಂಡ ವಿನಯ್ ಕುಮಾರ್ ಸೊರಕೆಯವರು ಹೇಳಿದರು.

ಅವರು ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ದಿ. ಎಚ್.ಗೋಪಾಲ್ ಭಂಡಾರಿಯವರ ನಿಧನಕ್ಕೆ ಸಂತಾಪ ಸೂಚಿಸುವ ಸಲುವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ) ಹಮ್ಮಿಕೊಂಡಿದ್ದ "ಶ್ರದ್ಧಾಂಜಲಿ ಸಭೆ"ಯಲ್ಲಿ ನುಡಿ-ನಮನ ಸಲ್ಲಿಸಿ ಮಾತನಾಡಿದರು. 

ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದು ಬಡವರ, ದುರ್ಬಲರ, ನಿರ್ಗತಿಕರ ಪರ ಧ್ವನಿಯೆತ್ತುವ ಜನಪರ ನಿಲುವಿನ ಜನಸೇವಕರಾಗಿ ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಸಮರ್ಪಣಾ ಮನೋಭಾವದ ಧೀಮಂತ ನಾಯಕರಾಗಿದ್ದರು ಎಂದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ,  ಒಬ್ಬ ಸರಳ-ಸಜ್ಜನಿಕೆಯ ಅನುಭವೀ ರಾಜಕರಣಿಯನ್ನು ನಾವು ಕಳೆದು ಕೊಂಡಿದ್ದೇವೆ. ಪಕ್ಷಕ್ಕೆ ಅವರ ಅನುಭವ, ಸಲಹೆಗಳು ಆಸ್ತಿಯಾಗಿದ್ದು, ನಿಜಕ್ಕೂ ಅವರ  ನಿಧನದಿಂದ ಪಕ್ಷ ಬರಿದಾಗಿದೆ ಎಂದರು.

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಎಂ. ಪಿ. ಮೈದಿನಬ್ಬ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ. ದಿವಾಕರ್ ಶೆಟ್ಟಿ, ಹಿರಿಯ ಮುಖಂಡರುಗಳಾದ ಸರಸು ಡಿ. ಬಂಗೇರ, ಶ್ರೀ.ಇಗ್ನೇಶಿಯಸ್ ಡಿಸೋಜ ಮತ್ತಿತರರು ನುಡಿ-ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ಸಿಗ, ಮಾಜಿ ಮಂಡಲ ಪಂಚಾಯತ್ ಸದಸ್ಯ ರಾಮ ಬಂಗೇರ ಅವರಿಗೂ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಪಕ್ಷದ ಮುಖಂಡರಾದ, ದೇವಪುತ್ರ ಕೋಟ್ಯಾನ್, ಶಿವಾಜಿ ಸುವರ್ಣ ಬೆಳ್ಳೆ, ಮೊಹಮ್ಮದ್ ಸಾದಿಕ್, ಪ್ರಭಾ ಶೆಟ್ಟಿ,   ಇಬ್ರಾಹಿಂ ಮನ್‍ಹರ್, ಐಡ ಗಿಬ್ಬ ಡಿಸೋಜ,   ಪ್ರಶಾಂತ್ ಜತನ್ನ, ಸುನಿಲ್ ಬಂಗೇರ, ನವೀನ್ ಎನ್. ಶೆಟ್ಟಿ, ದಿನೇಶ್ ಕೋಟ್ಯಾನ್, ಹರೀಶ್ ನಾಯಕ್, ನಾಗೇಶ್ ಸುವರ್ಣ, ಎಚ್. ಅಬ್ದುಲ್ಲಾ, ಕೆ. ಎಚ್. ಉಸ್ಮಾನ್, ದೀಪಕ್ ಎರ್ಮಾಳ್, ಜಿತೇಂದ್ರ ಫುರ್ಟಾಡೋ ಮತ್ತಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ಅಮೀರ್ ಮುಹಮ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News