ಮಂಗಳೂರು: ಶಿಕ್ಷಕ-ರಕ್ಷಕ ಸಂಘದ ಸಭೆ

Update: 2019-07-08 13:52 GMT

ಮಂಗಳೂರು, ಜು.8: ನಗರದ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯು ಶನಿವಾರ ಜರುಗಿತು.

ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ವಂದನೀಯ ಫಾ. ಡಯಾಸ್ ವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರೊಫೆಸರ್ ಡಾ. ಆಲ್ವಿನ್ ಡೇಸಾ ಮುಖ್ಯ ಭಾಷಣಗೈದರು. ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ ಜೊಸ್ವಿಟಾ ನೊರೊನ್ನಾ ವರದಿ ವಾಚಿಸಿದರು. ಈ ಸಂದರ್ಭ 2 ವರ್ಷದಿಂದ ಸಂಘದ ಉಪಾಧ್ಯಕ್ಷೆಯಾಗಿದ್ದ ರೇಖಾ ಫೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು.

ನೂತನ ಉಪಾಧ್ಯಕ್ಷ ಅರವಿಂದ ಕೆ., ಕಾರ್ಯದರ್ಶಿ ಜೊಸ್ವಿಟಾ ನೊರೊನ್ನಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಫಿಲೋಮಿನಾ ಲೂವಿಸ್ ಸ್ವಾಗತಿಸಿದರು. ಐರಿನ್ ಪಾಯಸ್ ಮತ್ತು ಅಕ್ಷಿತಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News