ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಆರ್ಥಿಕ ನೆರವು

Update: 2019-07-08 13:56 GMT

ಮಂಗಳೂರು, ಜು.8: ಥಾಲ್ಯಾಂಡಿನ ಬ್ಯಾಂಕಾಕ್‌ನಲ್ಲಿ ಜು.20ರಿಂದ 30ರವರೆಗೆ ನಡೆಯಲಿರುವ ಐಎಫ್ ಎಂಎ ಸೀನಿಯರ್ ವಲ್ಡ್ ಮೊತಾ ಚಾಂಪಿಯನ್ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಪ್ರಥಮ ಮಹಿಳಾ ಮೊತಾ ಆಟಗಾರ್ತಿ ಅನ್ವಿತಾ ಆಳ್ವ ಸುರತ್ಕಲ್ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಒಕ್ಕೂಟದ ವತಿಯಿಂದ 25 ಸಾವಿರ ರೂ. ಸಹಾಯಧನ ನೀಡಿದರು.

ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜತೆ ಕಾರ್ಯದರ್ಶಿ ಸತೀಶ ಶೆಟ್ಟಿ ಅಡಪ, ಮಾಜಿ ಕೋಶಾಧಿಕಾರಿ ಬಾಲಕೃಷ್ಣ ರೈ ಕೊಲ್ಲಾಡಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಸಚ್ಚಿದಾನಂದ ಹೆಗ್ಡೆ, ಸುರೇಶ್ ಶೆಟ್ಟಿ ಪುಚ್ಚಾಡಿ, ಜಯರಾಮ ಆಳ್ವ ತಡಂಬೈಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News