ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣೆ

Update: 2019-07-08 14:05 GMT

ಮಂಗಳೂರು, ಜು.8: ಧರ್ಮ ಮತ್ತು ಸಮಾಜ ಇವೆರಡನ್ನು ಅರ್ಥಮಾಡಿಕೊಂಡು ಜೀವಿಸಿದರೆ ಮಾತ್ರ ಮಾನವನ ಜೀವನದಲ್ಲಿ ಉದಾರತೆ ಕಾಣಲು ಸಾಧ್ಯ. ಮಾನವನ ಬೆಳವಣಿಗೆಗೆ ಶಿಕ್ಷಣ ಸಹಕಾರ ನೀಡುತ್ತದೆ. ಆ ಕೆಲಸವನ್ನು ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಮಾಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ಗ್ರಾಜುವೆಟ್ ಸ್ಟಡೀಸ್ ಮತ್ತು ರಿಸರ್ಚ್ ಕಂಪ್ಯೂಟರ್ ಸೈನ್ಸ್‌ನ ಪ್ರೊ. ಡಾ. ದೊರೆಸ್ವಾಮಿ ಹೇಳಿದರು.

ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಉಳ್ಳಾಲ ಸೆಂಟರ್ ಇದರ ಆಶ್ರಯದಲ್ಲಿ ಡಿಪ್ಲೊಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್‌ನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆಯಾದವರಿಗೆ ಕಲ್ಲಾಪು ಮಿನಿ ಹಾಲ್‌ನಲ್ಲಿ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಮಾತನಾಡಿ ಕೇವಲ ಲೌಕಿಕ ಶಿಕ್ಷಣದ ಜತೆಗೆ ಪದವಿ ಪಡೆದುಕೊಂಡರೆ ಶಿಕ್ಷಣ ಪೂರ್ತಿಯಾಗುವುದಿಲ್ಲ. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಹಮ್ಮ್ಮಿಕೊಂಡಿರುವ ಐದು ವರ್ಷದ ಕೋರ್ಸ್ ವಿದ್ಯಾರ್ಥಿಗಳಲ್ಲಿ ಬಹಳಷ್ಟು ಬದಲಾವಣೆ ತರಲು ಸಾಧ್ಯವಿದೆ. ಮದ್ರಸ ಶಿಕ್ಷಣಕ್ಕಿಂತಲೂ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನೀಡುವ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿ ಬೆಳೆಸುತ್ತದೆ ಎಂದರು.

ಉಪನ್ಯಾಸಕಿ ಮಂಜುಳಾ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ.ಎಂ. ಅಶ್ರಫ್ ಮಾತನಾಡಿದರು. ಈ ಸಂದರ್ಭ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಅಬ್ದುರ್ರಹೀಂ, ಜ.ಇ. ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ,ಎಸ್‌ಐಒ ಅಧ್ಯಕ್ಷ ನಿಝಾಮ್, ಜೆಐಒ ಅಧ್ಯಕ್ಷೆ ಎಂ. ಸೌದಾ ಉಪಸ್ಥಿತರಿದ್ದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News