ಮುಂಬೈ: ಮುಂದಿನ 24 ಗಂಟೆಯಲ್ಲಿ ಭಾರೀ ಮಳೆ

Update: 2019-07-08 17:10 GMT

ಮುಂಬೈ, ಜು. 8: ಮುಂಬೈಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ಮುಂಬೈ ಹಾಗೂ ಕೊಂಕಣ ಕರಾವಳಿಯ ವಲಯದಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈಯಲ್ಲಿ ಇಂದು ಬೆಳಗ್ಗೆ ಭಾರೀ ಮಳೆ ಸುರಿಯಿತು. ಇದರಿಂದ ನಗರದಾದ್ಯಂತ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡ್ಡಿ ಉಂಟಾಯಿತು. ಆದರೆ, ಯಾವುದೇ ವಿಮಾನಗಳ ಹಾರಾಟ ರದ್ದುಗೊಳಿಸಿಲ್ಲ. ವಿಮಾನ ಸಂಚಾರವನ್ನು ಬೆಳಗ್ಗೆ 9.12ರ ವರೆಗೆ ರದ್ದುಗೊಳಿಸಲಾಗಿತ್ತು. ಅನಂತರ ಬೆಳಗ್ಗೆ 9.31ಕ್ಕೆ ಮರು ಆರಂಭಿಸಲಾಗಿತ್ತು.

ಕೊಂಕಣ್, ಗೋವಾ ಹಾಗೂ ಮುಂಬೈ ಸಹಿತ ಉತ್ತರ ಮಧ್ಯಪ್ರದೇಶದಲ್ಲಿ ಈ ವಾರ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ ನಗರದ ಅಂಧೇರಿ ಪೂರ್ವ ಪ್ರದೇಶದಲ್ಲಿ ಗೋಡೆಯೊಂದು ಕುಸಿದಿದೆ. ಮಹಾರಾಷ್ಟ್ರ ಕೈಗಾರಿಕೆ ಅಭಿವೃದ್ಧಿ ಕಾರ್ಪೊರೇಶನ್‌ನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. 108 ಎಂಎಂ ದಾಖಲೆ ಮಳೆ ಜುಲೈ 8ರಂದು ಬೆಳಗ್ಗೆ ಮುಂಬೈ ಭಾರೀ ಮಳೆಗೆ ಸಾಕ್ಷಿಯಾಯಿತು. ಜುಲೈ 8ರಂದು ಬೆಳಗ್ಗೆ 8.30ರ ವರೆಗೆ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 33 ಎಂಎಂ ಮಳೆ ಸುರಿಯಿತು. ಆದರೆ, 8.30ರಿಂದ 11.30 ಗಂಟೆ ವರೆಗೆ ಕೇವಲ 3 ಗಂಟೆಯಲ್ಲಿ 108.2 ಎಂಎಂ ದಾಖಲೆ ಮಳೆ ಸುರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News