ಗಿಡ ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಂರಕ್ಷಣೆ ಸಾಧ್ಯ: ನವಾಝ್ ಸಖಾಫಿ ಅಲ್ ಅಮ್ಜದಿ

Update: 2019-07-08 17:33 GMT

ಉಳ್ಳಾಲ,ಜು.8: ಗಿಡ ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಂರಕ್ಷಣೆ ಸಾಧ್ಯವಿದ್ದು ವಿದ್ಯಾರ್ಥಿಗಳು ಈ ಗಿಡವನ್ನು ಪೋಷಿಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ಕೊಡುಗೆಯನ್ನು ನೀಡಬೇಕು ಎಂದು ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಭಿಪ್ರಾಯಪಟ್ಟರು. 

ಕಲ್ಲಾಪು ಪಟ್ಲದ ಖುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ  ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಕಲ್ಲಾಪು ಮಂಗಳೂರು ಇದರ 2019 - 2020ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗೂ ಇದರ ಅಂಗವಾಗಿ ಕಲ್ಲಾಪುವಿನ ಸಮಾಜ ಸ್ನೇಹಿ ಕುಟುಂಬವು ದಾನವಾಗಿ ನೀಡಿದ ಮಾವಿನ ಗಿಡಗಳನ್ನು ಮದ್ರಸ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಲ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಮಹಮೂದ್ ವಹಿಸಿದ್ದರು. 
ಪಟ್ಲ ಜುಮಾ ಮಸೀದಿ ಮುದರ್ರಿಸರಾದ ಇಝ್ಝುದ್ದೀನ್ ಅಹ್ಸನಿ ಮಾತನಾಡಿ ಸ್ವಸ್ಥ, ಸದ್ರಢ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಅರಿವು ಅನಿವಾರ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಕೇಂದ್ರ ಸಮಿತಿ ಸದಸ್ಯ ಮೊಯ್ದಿನ್, ಪಟ್ಲ ಮಸೀದಿ ಪ್ರಧಾನ ಕಾರ್ಯದರ್ಶಿ ಹಾರಿಸ್, ಜೊತೆ ಕಾರ್ಯದರ್ಶಿ ಸದ್ದಾಂ ಕಲ್ಲಾಪು, ಮದ್ರಸ ಅಧ್ಯಾಪಕ ಮುಹ್ಯಿದ್ದೀನ್ ಮುಸ್ಲಿಯಾರ್ ಹಾಗು ಮದ್ರಸ ವಿದ್ಯಾರ್ಥಿಗಳು, ಪೋಷಕರು, ಊರ ಬಾಂಧವರು ಉಪಸ್ಥಿತರಿದ್ದರು. ಮದ್ರಸ ಮುಖ್ಯೋಪಾಧ್ಯಾಯ ಮುನೀರ್ ಲತೀಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News