ಉಡುಪಿ: ಕೆಎಂಎಫ್‌ನಿಂದ ತರಬೇತಿ ಕಾರ್ಯಕ್ರಮ

Update: 2019-07-08 17:55 GMT

ಉಡುಪಿ, ಜು.8: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಉಡುಪಿ ಡೇರಿ ವ್ಯಾಪ್ತಿಯ ಹಾಲು ವಿತರಣಾ ವಾಹನದ ಗುತ್ತಿಗೆದಾರರು, ಚಾಲಕರು ಹಾಗೂ ಸಿಬ್ಬಂದಿಗಳಿಗೆ ಮಣಿಪಾಲ ಡೇರಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ನಂದಿನಿ ಡೀಲರ್‌ಗಳೊಂದಿಗೆ ವಿತರಣಾ ವಾಹನದ ಗುತ್ತಿಗೆದಾರರು ಹಾಗೂ ಚಾಲಕ ಸಿಬ್ಬಂದಿಗಳು ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕಾಗಿದೆ. ಉತ್ತಮ ರೀತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮಾರುಕಟ್ಟೆ ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ ಎಂದು ಹೇಳಿದ ಹೆಗ್ಡೆ, ಇದಕ್ಕಾಗಿ ಯಾವತ್ತೂ ಶೃದ್ಧೆಯಿಂದ, ನಿಷ್ಠೆಯಿಂ ಕೆಲಸ ನಿರ್ವಹಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಲು ವಿತರಣಾ ವಾಹನದ ಗುತ್ತಿಗೆದಾರರು ಹಾಗೂ ಸಿಬ್ಬಂದಿಗಳು ಹೇಗೆ ಉತ್ತಮ ರೀತಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಡೇರಿಯಿಂದ ಡೀಲರುಗಳಿಗೆ ತಲುಪಿಸಬೇಕು ಎಂಬುದನ್ನು ತಿಳಿಸಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಒಕ್ಕೂಟದ ನಿರ್ದೇಶಕರಾದ ಜಗದೀಶ್ ಕಾರಂತ್, ನರಸಿಂಹ ಕಾಮತ್ ಮತ್ತು ಸ್ಮಿತಾ. ಆರ್.ಶೆಟ್ಟಿ ಭಾಗವಹಿಸಿ ಮಾಹಿತಿ ನೀಡಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗ್ಡೆ ಡೀಲರ್‌ಗಳೊಂದಿಗೆ ಮಾಹಿತಿಗಳನ್ನು ನೀಡಿದರು.

ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕರಾದ ಜಯದೇವಪ್ಪಕೆ., ಡಾ. ರವಿರಾಜ ಉಡುಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ಯಾಮ್‌ಸುಂದರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News