ಪುತ್ತೂರು: ಗಾಳಿ ಮಳೆಗೆ ಹಾನಿ

Update: 2019-07-08 18:07 GMT

ಪುತ್ತೂರು: ರವಿವಾರ ರಾತ್ರಿ ಸುರಿದ ಗಾಳಿ ಮಳೆಗೆ ಪುತ್ತೂರು ನಗರ ಸಭಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಉರುಳಿ ಬಿದ್ದಿವೆ. ಆವರಣ ಗೋಡೆ ಕುಸಿದಿದೆ ಇಂಟರ್‍ಲಾಕ್ ರಸ್ತೆ ಹಾನಿಯಾಗಿದೆ. ನಗರಸಭೆಯ ಪೌರಾಯುಕ್ತರ ಸೂಚನೆಯಂತೆ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. 
ನಗರದ ಪಾಂಗಳಾಯಿ ಬೆಥನಿ ಶಾಲೆಯ ಬಳಿ ಇಂಟರ್‍ಲಾಕ್ ರಸ್ತೆ 10ಮೀ. ಉದ್ದಕ್ಕೆ ಕುಸಿದಿದೆ. ಇಲ್ಲಿ ಖಾಸಗಿಯವರ ಆವರಣಗೋಡೆ ಕುಸಿದು ಬಿದ್ದಿದೆ. ಶಾಲೆಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಪರಿಸರದಲ್ಲಿ ಇನ್ನೊಂದು ಅವರಣಗೋಡೆಯು ಕುಸಿಯುವ ಹಂತಕ್ಕೆ ಬಂದು ತಲುಪಿದೆ.

ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ರಸ್ತೆ, ಪಶುಸಂಗೋಪನಾ ಆಸ್ಪತ್ರೆಯ ಬಳಿ, ಮುಕ್ರಂಪಾಡಿಯಲ್ಲಿ ಮರಗಳು ಉರುಳಿಬಿದ್ದಿವೆ. ನಗರಸಭೆಯ ಆರೋಗ್ಯ ಇಲಾಖೆಯ ಸಿಬಂದಿ ಮತ್ತು ಇಂಜಿನೀಯರ್‍ಗಳು ಮರಗಳನ್ನು ರಸ್ತೆಯಿಂದ ತೆರವುಗೊಳಿಸುವ ಕಾಮಗಾರಿಯನ್ನು ನಡೆಸಿದ್ದಾರೆ. 

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಮಳೆನೀರು ಹರಿದು ಹೋಗುವ ಚರಂಡಿಗಳು ಪೂರ್ತಿ ದುರಸ್ತಿಯಾಗಿಲ್ಲ ರಾಜಕಾಲುವೆಗಳಲ್ಲಿ ಕೂಡಾ ನೀರು ಹರಿದು ಹೋಗುತ್ತಿಲ್ಲ. ಕೃತಕ ನೆರೆಯೂ ಸೇರಿದಂತೆ ಪ್ರಾಕೃತಿಕ ವಿಕೋಪಗಳು ನಡೆಯುವ ಸಾಧ್ಯತೆಗಳಿವೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ, ನಗರಸಭೆಯ ಅಧಿಕಾರಿಗಳು ಮುಂಗಾರು ಪೂರ್ವ ಕಾಮಗಾರಿಗಳ ಕುರಿತಂತೆ ನಿರ್ಲಕ್ಷ ವಹಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಪ್ರಾಕೃತಿಕ ವಿಕೋಪದಿಂದ ಹಾನಿಯುಂಟಾದ ಕಡೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ತ್ವರಿತ ಕ್ರಮಗಳನ್ನು ಅನುಸರಿಸಲಾಗಿದೆ. ಅರಣ್ಯ ಇಲಾಖೆಯ ಸಹಕಾರ ಅಪಾಯಕಾರಿ ಮರಗಳ ತೆರವು ಮತ್ತು ಉರುಳಿದ ಮರಗಳ ತೆರವಿಗೆ ಅತೀ ಅಗತ್ಯವಾಗಿದೆ.
ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ ಪುತ್ತೂರು
....................
ನಗರದ ಪಾಂಗಳಾಯಿಯಲ್ಲಿ ಶಾಲಾ ರಸ್ತೆಯು ಕುಸಿದ ಹಿನ್ನಲೆಯಲ್ಲಿ ನಗರಸಭೆಗೆ ಜಿಲ್ಲಾಧಿಕಾರಿ ಅವರು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಅನುದಾನ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯುತ್ತೇನೆ.
ವಿದ್ಯಾ ಆರ್. ಗೌರಿ, ನಗರಸಭಾ ಸದಸ್ಯೆ, ಪಾಂಗಳಾಯಿ ವಾರ್ಡ್, ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News