ಉಚ್ಚಿಲದಲ್ಲಿ ಪಿಎಫ್ಐ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ಡೇ

Update: 2019-07-08 18:09 GMT

ಪಡುಬಿದ್ರಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಡುಬಿದ್ರಿ ಡಿವಿಷನ್ ವತಿಯಿಂದ ಈದ್ ಮಿಲನ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮವನ್ನು ಉಚ್ಚಿಲ ಬಬೂಲ್ ಗ್ರೌಂಡ್ ನಲ್ಲಿ ರವಿವಾರ ಆಯೋಜಿಸಲಾಯಿತು.

ಪಿಎಫ್‌ಐ ಪಡುಬಿದ್ರಿ ಡಿವಿಷನ್ ಅಧ್ಯಕ್ಷ ಮಜೀದ್ ಪೊಲ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ‌ ಮಾತನಾಡಿದ ಅವರು, ಕ್ರೀಡೆ ಎಂಬುವುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ, ಆರೋಗ್ಯವಂತ ವ್ಯಕ್ತಿಗಳಿಂದ ಆರೋಗ್ಯ ಭರಿತ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ. ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕೆಂದರು.

ಪಿಎಫ್‌ಐ ಪಡುಬಿದ್ರಿ ಡಿವಿಷನ್ ಕಾರ್ಯದರ್ಶಿ ತೌಫೀಕ್ ಪಡು ಉಚ್ಚಿಲ ಸ್ವಾಗತಿ ವಂದಿಸಿದರು ಉಚ್ಚಿಲ ಏರಿಯಾ ಅಧ್ಯಕ್ಷ ಶರೀಫ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News