ಸಾಧುಕುಂಞಿ ಹಾಜಿ ನಿಧನ

Update: 2019-07-08 18:29 GMT

ಉಪ್ಪಿನಂಗಡಿ, ಜು.8: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮುಹಮ್ಮದ್ ಮದನಿ ಅವರ ತಂದೆ ಸಾಧುಕುಂಞಿ ಹಾಜಿ (88) ನಿಧನರಾಗಿದ್ದಾರೆ.

ಉರುವಾಲುಪದವಿನ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರು ತನ್ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದು, ಮೃತರು 6 ಪುತ್ರರು 7 ಪುತ್ರಿಯರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಾಧುಕುಂಞಿ ಹಾಜಿಯ ನಿಧನಕ್ಕೆ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್,  ಕರ್ನಾಟಕ ಮುಸ್ಲಿಂ ಜಮಾತ್ ಉಪಾಧ್ಯಕ್ಷ ಅಬೂಸುಫ್ಯಾನ್ ಮದನಿ ಸೇರಿ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News