ಕೇಂದ್ರ ಸೇವೆಗೆ ಹೆಚ್ಚು ಅಧಿಕಾರಿಗಳನ್ನು ಕಳುಹಿಸಲು ರಾಜ್ಯಗಳಿಗೆ ಸಿಬ್ಬಂದಿ ಸಚಿವಾಲಯದ ನೋಟಿಸ್

Update: 2019-07-09 16:38 GMT

ಹೊಸದಿಲ್ಲಿ,ಜು.9: ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧವಿರುವ ಅಧಿಕಾರಿಗಳ ಕೊರತೆಯನ್ನು ಉಲ್ಲೇಖಿಸಿರುವ ಸಿಬ್ಬಂದಿ ಸಚಿವಾಲಯವು, ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಸುಸಂಗತ ಅನುಭವಗಳ ವಿನಿಮಯಕ್ಕಾಗಿ ಕೇಂದ್ರದಲ್ಲಿ ಪ್ರಭಾರ ಸೇವೆಗಾಗಿ ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿಗಳು ನಾಮಕರಣಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಎಲ್ಲ ರಾಜ್ಯಗಳಿಗೆ ಸೂಚಿಸಿದೆ.

ಕೇಂದ್ರಕ್ಕೆ ಪ್ರಭಾರ ಸೇವೆಯಲ್ಲಿ, ವಿಶೇಷವಾಗಿ ಉಪ ಕಾರ್ಯದರ್ಶಿ ಅಥವಾ ನಿರ್ದೇಶಕ ಮಟ್ಟದಲ್ಲಿ ರಾಜ್ಯದ ಅಧಿಕಾರಿಗಳ ನಿಯೋಜನೆ ಅತ್ಯಂತ ಕಡಿಮೆಯಾಗಿದೆ ಎಂದು ಸಚಿವಾಲಯವು ಈ ರಾಜ್ಯಗಳಿಗೆ ರವಾನಿಸಿರುವ ನೋಟಿಸ್‌ ನಲ್ಲಿ ತಿಳಿಸಿದೆ.

ಕೇಂದ್ರ ಆಯ್ಕೆ,ತರಬೇತಿ ಮತ್ತು ನೇಮಕ ಯೋಜನೆಯಡಿ ಹುದ್ದೆಗಳಿಗೆ ಪ್ರಭಾರ ನಿಯೋಜನೆಗಾಗಿ ಹಾಗೂ ಕೇಂದ್ರೀಯ ಪಿಎಸ್‌ಯುಗಳಲ್ಲಿ ಮುಖ್ಯ ಜಾಗ್ರತ ಅಧಿಕಾರಿ(ಸಿವಿಒ)ಗಳ ಹುದ್ದೆಗಳಿಗೆ ನೇಮಕಕ್ಕಾಗಿಯೂ ಅಧಿಕಾರಿಗಳನ್ನು ನಾಮಕರಣಗೊಳಿಸುವಂತೆ ಸಿಬ್ಬಂದಿ ಸಚಿವಾಲಯವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು.

 ಅರ್ಜಿಗಳನ್ನು ಆಹ್ವಾನಿಸಿ ಆರು ತಿಂಗಳುಗಳು ಕಳೆದಿದ್ದರೂ ಸ್ವೀಕೃತಿಯಾಗಿರುವ ಅರ್ಜಿಗಳ ಸಂಖ್ಯೆ ನಗಣ್ಯವಾಗಿದೆ. ಎಂದು ತಿಳಿಸಿರುವ ಅದು,ಕೇಂದ್ರ ಆಯ್ಕೆ,ತರಬೇತಿ ಮತ್ತು ನೇಮಕ ಯೋಜನೆಯಡಿ ವಿಶೇಷವಾಗಿ ಉಪ ಕಾರ್ಯದರ್ಶಿ ಅಥವಾ ನಿರ್ದೇಶಕ ದರ್ಜೆಯ ಹುದ್ದೆಗಳಿಗೆ ವಿವಿಧ ಕೇಡರ್‌ಗಳು ಅಥವಾ ಸೇವೆಗಳಿಂದ ಅಧಿಕಾರಿಗಳ ಅತ್ಯಂತ ಕಡಿಮೆ ಪ್ರಾತಿನಿಧ್ಯವನ್ನು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News