×
Ad

ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆ, ಮಗುವನ್ನು ನದಿಗೆ ಹಾರಿ ರಕ್ಷಿಸಿದ 11 ವರ್ಷದ ಬಾಲಕ

Update: 2019-07-09 23:08 IST
Photo: ANI

ಹೊಸದಿಲ್ಲಿ, ಜು.9: ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವನ್ನು 11 ವರ್ಷದ ಬಾಲಕನೊಬ್ಬ ರಕ್ಷಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೆಚ್ಚುತ್ತಿದ್ದ ನೀರಿನಲ್ಲಿ ಈಜಿದ ಬಾಲಕ ಈ ಇಬ್ಬರನ್ನೂ ರಕ್ಷಿಸಿದ್ದಾನೆ.

ಅಸ್ಸಾಂನ ಸಣ್ಣ ನದಿಯೊಂದನ್ನು ದಾಟಲು ಮಹಿಳೆ ಯತ್ನಿಸುತ್ತಿದ್ದಾಗ ಒಮ್ಮೆಲೇ ನೀರಿನ ಮಟ್ಟ ಹೆಚ್ಚಿತ್ತು. ಮಗು ಮತ್ತು ಮಹಿಳೆ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ ಬಾಲಕ ಉತ್ತಮ್ ಕೂಡಲೇ ನದಿಗೆ ಹಾರಿ ಇಬ್ಬರನ್ನೂ ರಕ್ಷಿಸಿದ್ದಾನೆ.

ರಾಷ್ಟ್ರೀಯ ಶೌರ್ಯ ಪುರಸ್ಕಾರಕ್ಕೆ ಉತ್ತಮ್ ನ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News