ಭಾರತಕ್ಕೆ ‘ರಾಷ್ಟ್ರೀಯ ಪುಷ್ಪ’ ಇಲ್ಲ

Update: 2019-07-10 16:32 GMT

ಹೊಸದಿಲ್ಲಿ, ಜು.10: ಕೇಂದ್ರ ಸರಕಾರವು ಯಾವುದೇ ಹೂವಿಗೂ ‘ರಾಷ್ಟ್ರೀಯ ಪುಷ್ಪ’ದ ಸ್ಥಾನಮಾನವನ್ನು ನೀಡಿಲ್ಲವೆಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪರಿಸರ,ಅರಣ್ಯ, ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು 2011ರಲ್ಲಿ ಪ್ರಕಟಿಸಿದ ಅಧಿಸೂಚನೆಗಳ ಮೂಲಕ ‘ಹುಲಿ’ ಯನ್ನು ರಾಷ್ಟ್ರೀಯ ಪ್ರಾಣಿ ಹಾಗೂ ನವಿಲನ್ನು ರಾಷ್ಟ್ರೀಯ ಪಕ್ಷಿಯಾಗಿ ಪರಿಗಣಿಸಿದೆಯೆಂದು ತಿಳಿಸಿದರು.

ಆದಾಗ್ಯೂ ರಾಷ್ಟ್ರೀಯ ಪುಷ್ಪಕ್ಕೆ ಸಂಬಂಧಿಸಿ ಈತನಕ ಸಚಿವಾಲಯವು ಸಚಿವಾಲಯವು ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲವೆಂದು ನಿತ್ಯಾನಂದ ರಾಯ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News