ಸೈಲೆನ್ಸ್ ಪ್ಲೀಸ್: ಕಲಾಪದ ವೇಳೆ ಮಾತು ಬೇಡ

Update: 2019-07-10 16:34 GMT

ಹೊಸದಿಲ್ಲಿ,ಜು.10: ಸದನದಲ್ಲಿ ಕಲಾಪಗಳು ನಡೆಯುತ್ತಿರುವಾಗ ಮಾತನಾಡದಂತೆ ಬುಧವಾರ ಸಂಸದರಿಗೆ ಸೂಚಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು,ಅಂತಹ ವರ್ತನೆ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದರು.

ಇತರ ಸದಸ್ಯರೊಂದಿಗೆ ಮಾತನಾಡುವುದಿದ್ದರೆ ಕೆಲವೇ ಹೆಜ್ಜೆಗಳ ಅಂತರದಲ್ಲಿರುವ ಗ್ಯಾಲರಿಗೆ ತೆರಳುವಂತೆಯೂ ಅವರು ಸಂಸದರಿಗೆ ತಿಳಿಸಿದರು.

  ಕಲಾಪಗಳು ನಡೆಯುತ್ತಿರುವಾಗ ಕುಳಿತುಕೊಂಡು ಅಥವಾ ನಿಂತುಕೊಂಡು ಪರಸ್ಪರ ಮಾತನಾಡುತ್ತಿರುವ ಕೆಲವು ಸದಸ್ಯರ ಪ್ರವೃತ್ತಿಯನ್ನು ನಾನು ಗಮನಿಸಿದ್ದೇನೆ. ಇದು ನಿಮ್ಮ ಸದನ. ಆ ರೀತಿಯಲ್ಲಿ ಸದನವನ್ನು ನಡೆಸಲು ನೀವು ಬಯಸಿದರೆ ನಾನು ಅದಕ್ಕೆ ಸಿದ್ಧ. ಆದರೆ ಅದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಸ್ಪೀಕರ್ ಪ್ರಕಟಣೆಯನ್ನು ಸದಸ್ಯರು ಮೇಜುಳನ್ನು ಕುಟ್ಟಿ ಬೆಂಬಲಿಸಿದರು.

 ಇದು ಸಂಸದರ ಹಳೆಯ ಗೀಳಾಗಿದೆ ಮತ್ತು ಇದು ಸುಲಭದಲ್ಲಿ ಬದಲಾಗುವುದಿಲ್ಲ. ನೀವು ಆಗಾಗ್ಗೆ ಅವರಿಗೆ ಹೇಳುತ್ತಿರಬೇಕಾಗುತ್ತದೆ ಎಂದು ತೃಣಮೂಲ ನಾಯಕ ಸುದೀಪ ಬಂಡೋಪಾಧ್ಯಾಯ ಅವರು ಸ್ಪೀಕರ್ ಅವರನ್ನು ಕೋರಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News