11 ದಿನದೊಳಗೆ ಪಾಸ್‌ಪೋರ್ಟ್: ಮುರಳೀಧರನ್

Update: 2019-07-10 17:32 GMT

ಹೊಸದಿಲ್ಲಿ, ಜು.10: ಸಾಮಾನ್ಯ ಸಂದರ್ಭಗಳಲ್ಲಿ ಜನತೆಗೆ 11 ದಿನದಲ್ಲಿ ಪಾಸ್‌ಪೋರ್ಟ್ ಒದಗಿಸಲಾಗುವುದು ಎಂದು ವಿದೇಶ ವ್ಯಹಹಾರ ಇಲಾಖೆಯ ಸಹಾಯಕ ಸಚಿವ ವಿ ಮುರಳೀಧರನ್ ಲೋಕಸಭೆಯಲ್ಲಿ ಹೇಳಿದ್ದಾರೆ.

 ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, ತತ್ಕಾಲ ವಿಭಾಗದಲ್ಲಿ ಪಾಸ್‌ಪೋರ್ಟನ್ನು ಒಂದೇ ದಿನದಲ್ಲಿ ಒದಗಿಸಲಾಗುತ್ತದೆ ಎಂದ ಅವರು, ಪಾಸ್‌ಪೋರ್ಟ್ ಅರ್ಜಿದಾರರ ಪೊಲೀಸ್ ಪರಿಶೀಲನೆಗಾಗಿ 731 ಪೊಲೀಸ್ ಠಾಣೆಗಳಲ್ಲಿ ಆ್ಯಪ್ ಆರಂಭಿಸಲಾಗಿದೆ. ಇದರಿಂದ ಪೊಲೀಸ್ ಪರಿಶೀಲನೆಯಲ್ಲಿ ಆಗುತ್ತಿರುವ ವಿಳಂಬದ ಸಮಸ್ಯೆ ನಿವಾರಣೆಯಾಗಲಿದೆ ಎಂದವರು ಹೇಳಿದರು.

ಪಾಸ್‌ಪೋರ್ಟ್ ಪಡೆಯಲು ಜನತೆ ಪಡುತ್ತಿರುವ ತೊಂದರೆಯ ಬಗ್ಗೆ ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ದೇಶದಲ್ಲಿರುವ 36 ಪಾಸ್‌ಪೋರ್ಟ್ ಕಚೇರಿಯಲ್ಲದೆ 93 ಪಾಸ್‌ಪೋರ್ಟ್ ಸೇವಾಕೇಂದ್ರಗಳು ಹಾಗೂ 412 ಅಂಚೆಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿವೆ ಎಂದು ಸಚಿವರು ಹೇಳಿದರು. ಪಾಸ್‌ಪೋರ್ಟ್ ಸೇವಾಕೇಂದ್ರಗಳ ಕಾರ್ಯನಿರ್ವಹಣೆಯಲ್ಲಿ ಖಾಸಗಿ ಸಂಸ್ಥೆ ಭಾಗಿಯಾಗಿಲ್ಲ ಎಂದವರು ಪೂರಕ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News