1,500 ಐಎಎಸ್ ಅಧಿಕಾರಿಗಳ ಕೊರತೆ: ಕೇಂದ್ರ ಸರಕಾರ

Update: 2019-07-10 17:39 GMT

ಹೊಸದಿಲ್ಲಿ, ಜು.10: ದೇಶದಲ್ಲಿ ಸುಮಾರು 1,500 ಐಎಎಸ್ ಅಧಿಕಾರಿಗಳ ಕೊರತೆಯಿದೆ ಎಂದು ಸರಕಾರ ತಿಳಿಸಿದೆ.

 ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಿಬಂದಿ ಸಚಿವಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್, ದೇಶದಲ್ಲಿ 6,699 ಐಎಎಸ್ ಅಧಿಕಾರಿಗಳಿರಬೇಕಿದ್ದು 2019ರ ಜನವರಿ 1ರ ವೇಳೆಗೆ 5,205 ಅಧಿಕಾರಿಗಳು ಕರ್ತವ್ಯದಲ್ಲಿದ್ದರು ಎಂದು ತಿಳಿಸಿದ್ದಾರೆ. ಐಎಎಸ್ ಅಧಿಕಾರಿಗಳ ಕೊರತೆ ನೀಗಿಸಲು ನಿಗದಿತ ನೇಮಕ ಕೋಟಾದ ಜೊತೆಗೆ ನಾಗರಿಕ ಸೇವಾ ಪರೀಕ್ಷೆ ತೇರ್ಗಡೆಯಾದವರನ್ನು ಐಎಎಸ್ ಹುದ್ದೆಗೆ ನೇಮಿಸುವ ಪ್ರಮಾಣವನ್ನು 55ರಿಂದ 180ಕ್ಕೇರಿಸಲಾಗಿದೆ ಎಂದವರು ಹೇಳಿದ್ದಾರೆ.

ರಾಜ್ಯ ಸೇವಾ ಅಧಿಕಾರಿಗಳನ್ನು ಐಎಎಸ್ ಅಧಿಕಾರಿಗಳ ಹುದ್ದೆಗೆ ಭಡ್ತಿಗೊಳಿಸುವ ಸಂದರ್ಭ ಆಯ್ಕೆ ಸಮಿತಿ ಸಭೆ ನಡೆಸಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News