ಹಣ ಅಕ್ರಮ ವರ್ಗಾವಣೆ ಪ್ರಕರಣ: ಮೀಸಾ ಭಾರತಿ ವಿರುದ್ಧ ಆರೋಪಪಟ್ಟಿ ದಾಖಲು

Update: 2019-07-10 17:43 GMT

ಹೊಸದಿಲ್ಲಿ, ಜು.10: ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಪುತ್ರಿ ಮೀಸಾ ಭಾರತಿ ವಿರುದ್ಧ ಜಾರಿ ನಿರ್ದೇಶನಾಲಯ ಪೂರಕ ಆರೋಪಪಟ್ಟಿ ದಾಖಲಿಸಿದೆ. ಹೊಸ ಆರೋಪಪಟ್ಟಿಯಲ್ಲಿ 20 ಸಂಸ್ಥೆಗಳ ಸಹಿತ 35 ಹೊಸ ಆರೋಪಿಗಳನ್ನು ಹೆಸರಿಸಲಾಗಿದೆ.

15 ಮಂದಿಯಲ್ಲಿ 8 ಚಾರ್ಟರ್ಡ್ ಅಕೌಂಟೆಂಟ್‌ಗಳ ಹೆಸರಿದ್ದು ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರೆದುರು ಆರೋಪಪಟ್ಟಿ ಸಲ್ಲಿಸಲಾಗಿದೆ. ನಕಲಿ ಸಂಸ್ಥೆಗಳ ಹೆಸರಿನಲ್ಲಿ ಸುರೇಂದ್ರ ಕುಮಾರ್ ಜೈನ್ ಹಾಗೂ ವೀರೇಂದರ್ ಜೈನ್ ಸಹೋದರರು ಹಾಗೂ ಇತರರು ಹಲವು ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2017ರ ಜುಲೈಯಲ್ಲಿ ಫಾರ್ಮ್‌ಹೌಸ್ ಹಾಗೂ ಇತರ ಸ್ಥಳಗಳ ಮೇಲೆ ದಾಳಿ ನಡೆಸಿ ರಾಜೇಶ್ ಅಗರ್ವಾಲ್ ಎಂಬ ಚಾರ್ಟರ್ಡ್ ಅಕೌಂಟೆಂಟ್‌ನನ್ನು ಬಂಧಿಸಿದ್ದರು.

ಈತ ಮಿಶಾಲಿ ಪ್ಯಾಕರ್ಸ್ ಆ್ಯಂಡ್ ಪ್ರಿಂಟರ್ಸ್ ಎಂಬ ಸಂಸ್ಥೆಯಲ್ಲಿ ಜೈನ್ ಸಹೋದರರು ಹಣ ವಿನಿಯೋಗಿಸಲು ನೆರವಾಗಿದ್ದ. ಮಿಶಾಲಿ ಪ್ಯಾಕರ್ಸ್ ಸಂಸ್ಥೆಯಲ್ಲಿ ಈ ಹಿಂದೆ ಮೀಸಾ ಭಾರತಿ ಹಾಗೂ ಅವರ ಪತಿ ನಿರ್ದೇಶಕರಾಗಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News