ಮುಲ್ಕಿ: ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮುಹಲ್ಲಿಂ ಒಕ್ಕೂಟ ಕರೆ

Update: 2019-07-11 08:27 GMT

ಮುಲ್ಕಿ: ಸುರತ್ಕಲ್ ರೇಂಜ್ ಮುಹಲ್ಲಿಂ ಒಕ್ಕೂಟದ ಮಹಾಸಭೆ ಮತ್ತು ಹಾಜಿಗಳಿಗೆ ಬೀಳ್ಕೊಡುಗೆ ಸಮಾರಂಭ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ಮುಫತ್ತಿಷ್ ರಶೀದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಜರಗಿತು.

ಬೊಳ್ಳೂರು ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಹಜ್ ಕರ್ಮ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಾಗಿದ್ದು ಅದನ್ನು ನಿರ್ವಹಿಸಲು‌ ಅಲ್ಲಾಹನ ಪ್ರತ್ಯೇಕ ಅನುಗ್ರಹ ಬೇಕಾಗಿದೆ. ಪ್ರಾರ್ಥನೆಗೆ ಉತ್ತರ ಲಭಿಸುವ ಪುಣ್ಯ ಸ್ಥಳಗಳಲ್ಲಿ ಎಲ್ಲಾ ಮಾನವ ಕುಲದ ಹಿತಕ್ಕಾಗಿ ದೇವರಲ್ಲಿ ಮೊರೆ ಇಡುವಂತೆ ಹಾಜಿಗಳಲ್ಲಿ ಮನವಿ ಮಾಡಿದರು.

ಜುಮಾ ಮಸೀದಿಯ ಮುದರ್ರಿಸ್  ಯಸ್ ಬಿ ದಾರಿಮಿ ಪ್ರಾಸ್ತಾವಿಕವಾಗಿ  ಮಾತನಾಡುತ್ತಾ ಇಂದು  ನಮ್ಮ ಸುತ್ತ ಮುತ್ತ  ಕೆಡುಕುಗಳು ವ್ಯಾಪಕ ಗೊಂಡಿದ್ದು ಅದು ನಿರ್ದಿಷ್ಟ ಜಾತಿ ಜನಾಂಗಕ್ಕೆ ಸೀಮಿತ ಗೊಂಡಿಲ್ಲ. ಭಯೋತ್ಪಾದನೆಗಿಂತಲೂ ಘೋರವಾದ ಮಾದಕ ದ್ರವ್ಯಗಳಿಂದಾಗಿ ಎಲ್ಲಾ ಸಮಾಜವೂ ಹಲವಾರು ದುರಂತಗಳನ್ನು ಅನುಭವಿಸುವಂತಾಗಿದೆ. ಜಾತಿ ಧರ್ಮದ ಆಧಾರದಲ್ಲಿ ಕೆಡುಕುಗಳನ್ನು ವಿಭಜಿಸುವುದು ತಪ್ಪು.ಕಾನೂನು ಪಾಲಕರು ಈ ಬಗ್ಗೆ ಕಟ್ಡುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗ ಬೇಕಲ್ಲದೆ ಶಾಲಾ , ಮದ್ರಸ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ರೇಂಜ್ ಮುಹಲ್ಲಿಂ ಒಕ್ಕೂಟ ಕರೆ ನೀಡುತ್ತಿದೆ ಎಂದರು.

ಮೌಲಾನ ಯು ಕೆ ದಾರಿಮಿ ಚೊಕ್ಕಬೆಟ್ಟು, ಮುದರ್ರಿಬ್ ಮುಝಮ್ಮಿಲ್ ಪೈಝಿ ಕೇರಳ, ಮೇನೇಜ್ ಮೆಂಟ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಉಸ್ಮಾನ್ ಅಬ್ದುಲ್ಲ ಸೂರಿಂಜೆ ಮೊದಲಾದವರು ಮಾತನಾಡಿದರು.

ಇದೇ ವೇಳೆ ಈ ವರ್ಷ ಹಜ್ ಗೆ ತೆರಳಲಿರುವ ಜಿಲ್ಲಾ ಮ್ಯಾನೇಜ್ ಮೆಂಟ್ ಅಧ್ಯಕ್ಷ ಐ ಮೊಯಿದಿನಬ್ಬ ಹಾಜಿ, ಚೊಕ್ಕಬೆಟ್ಟು ಅಝೀಝ್ ದಾರಿಮಿ ,ಅಬ್ದುಲ್ಲ ದಾರಿಮಿ ಬೈತಡ್ಕ ಮುಝಮ್ಮಿಲ್ ಪೈಝಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಇಸ್ಮಾಯಿಲ್ ದಾರಿಮಿ ಖತೀಬ್  ಕಾರ್ನಾಡು, ರೇಂಜ್ ಮ್ಯಾನೇಜ್ ಮೆಂಟ್ ಕೋಶಾಧಿಕಾರಿ ಅಹ್ಮದ್ ಬಾವ, ಇಮ್ತಿಯಾಝ್ ಇಡ್ಯಾ, ಇಬ್ರಾಹಿಂ ಕಾರ್ನಾಡ್, ಅಬೂಬಕರ್ ಇಡ್ಯಾ ಮೊದಲಾದವರು ಉಪಸ್ಥಿತರಿದ್ದರು.

ರೇಂಜ್ ಕಾರ್ಯದರ್ಶಿ ಹನೀಫ್ ದಾರಿಮಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News