ಅಪಘಾತ ವಲಯ ಗುರುತಿಸಲು 14,000 ಕೋಟಿ ರೂ. ಮೊತ್ತದ ಯೋಜನೆ ಸಿದ್ಧ: ಗಡ್ಕರಿ

Update: 2019-07-11 15:49 GMT

ಹೊಸದಿಲ್ಲಿ, ಜು.10: ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಪಘಾತ ವಲಯ ಗುರುತಿಸುವ 14000 ಕೋಟಿ ರೂ. ಮೊತ್ತದ ಯೋಜನೆಯನ್ನು ಸರಕಾರ ರೂಪಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಈ ಯೋಜನೆಗೆ ಸರಕಾರ ತಾತ್ವಿಕ ಅನುಮೋದನೆ ನೀಡಿದ್ದು, ಯೋಜನೆ ಜಾರಿಗೊಳಿಸಲು ವಿಶ್ವಬ್ಯಾಂಕನ್ನು ಸಂಪರ್ಕಿಸಲಾಗಿದೆ. ಹೆದ್ದಾರಿ ಸುರಕ್ಷತೆ ಖಾತರಿಗೊಳಿಸುವುದು ತಮ್ಮ ಸರಕಾರಕ್ಕೆ ಅತ್ಯಂತ ಪ್ರಮುಖ ವಿಷಯವಾಗಿದೆ. ನಮ್ಮ ಪ್ರಯತ್ನದ ಹೊರತಾಗಿಯೂ ರಸ್ತೆ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರೂಪಿಸಲಾದ 14,000 ಕೋಟಿ ರೂ. ಮೊತ್ತದ ಯೋಜನೆಯು ಅಪಘಾತ ವಲಯವನ್ನು ಗುರುತಿಸುವುದರಿಂದ ಲೋಪದೋಷಗಳನ್ನು ಸರಿಪಡಿಸಬಹುದು ಎಂದರು. ರಸ್ತೆ ಅಪಘಾತ ಕಡಿಮೆಗೊಳಿಸಲು ತಮಿಳುನಾಡು ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಅವರು, ಇತರ ರಾಜ್ಯಗಳು ಕೈಗೊಂಡಿರುವ ಕ್ರಮ ಸಾಲದು ಎಂದರು.

2016ರಲ್ಲಿ ದೇಶದಲ್ಲಿ ಒಟ್ಟು 4,80,652 ರಸ್ತೆ ಅಪಘಾತ ಸಂಭವಿಸಿದ್ದು 1,50,785 ಜೀವ ಬಲಿಯಾಗಿದೆ ಮತ್ತು 4,94,624 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ನಿಯಂತ್ರಣ ದಳದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News