ಆರೆಸ್ಸೆಸ್ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2019-07-11 17:01 GMT

ನಾಗಪುರ, ಜು. 11: ನಾಗಪುರದ ರೇಶಿಮ್‌ಭಾಗ್‌ನಲ್ಲಿರುವ ಡಾ. ಹೆಡ್ಗೆವಾರ್ ಸ್ಮತಿ ಮಂದಿರದ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಪ್ರತಿವಾದಿಯಾಗಿರುವ ತನ್ನನ್ನು ತೆಗೆಯುವಂತೆ ಕೋರಿ ಆರೆಸ್ಸೆಸ್ ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಬುಧವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಆರ್.ಕೆ. ದೇಶ್‌ಪಾಂಡೆ ಹಾಗೂ ವಿನಯ್ ಜೋಷಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮನವಿ ತಿರಸ್ಕರಿಸಿದೆ.

ತೆರಿಗೆದಾರರ ಹಣದಿಂದ ಡಾ. ಹೆಡ್ಗೆವಾರ್ ಸ್ಮತಿ ಮಂದಿರದ ಕಾಮಗಾರಿಗೆ 1.37 ಕೋಟಿ ರೂಪಾಯಿ ಮಂಜೂರು ಮಾಡಿರುವ ಬಗ್ಗೆ ಪ್ರಶ್ನಿಸಿ ಜನಾದರ್ನ್ ಮೂನ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು 2017 ಸೆಪ್ಟಂಬರ್ 20ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಆರೆಸ್ಸೆಸ್ ನ ಪ್ರಧಾನ ಕಾರ್ಯದರ್ಶಿ ಭೈಯಾಜಿ ಜೋಷಿ ಹಾಗೂ ನಾಗಪುರದ ನಗರಾಡಳಿತಕ್ಕೆ ನೋಟಿಸು ಜಾರಿ ಮಾಡಿತ್ತು.

ಈ ಪ್ರಕರಣದಲ್ಲಿ ನಾಗಪುರ ನಗರಾಡಳಿತದ ಆಯುಕ್ತರು ಹಾಗೂ ನಗರಾಡಳಿತದ ಸ್ಥಾಯಿ ಸಮಿತಿ ಕೂಡ ಪ್ರತಿವಾದಿಗಳಾಗಿದ್ದು, ಸ್ಮತಿ ಮಂದಿರಕ್ಕೆ ಆವರಣ ಗೋಡೆ ಹಾಗೂ ಆಂತರಿಕ ರಸ್ತೆ ನಿರ್ಮಾಣ ಮಾಡಲು 1.37 ಕೋ. ರೂಪಾಯಿ ಮಂಜೂರು ಮಾಡಿದೆ.

ನಾಗರಿಕ ಸುರಕ್ಷಾ ಮಂಚ್‌ನ ಅಧ್ಯಕ್ಷ ಮೂನ್ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ, ಆರೆಸ್ಸೆಸ್ ಖಾಸಗಿ ಸಂಘಟನೆ. ಸೃತಿ ಮಂದಿರದ ಕಾಮಗಾರಿಗೆ ನಾಗಪುರ ನಗರಾಡಳಿತದ ಸ್ಥಾಯಿ ಸಮಿತಿ ತೆರಿಗೆದಾರರ ಹಣವನ್ನು ಮಂಜೂರು ಮಾಡುವುದು ಹಣದ ದುರ್ಬಳಕೆ ಎಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News