ಆಧಾರ್- ಪಾನ್‌ ಕಾರ್ಡ್ ಜೋಡಣೆಗೆ ಅಂತಿಮ ದಿನಾಂಕ ಯಾವುದು ಗೊತ್ತಾ ?

Update: 2019-07-11 17:26 GMT

ಹೊಸದಿಲ್ಲಿ, ಜು.11: ಆಧಾರ್‌ ನೊಂದಿಗೆ ಪ್ಯಾನ್‌ಕಾರ್ಡ್ ಜೋಡಣೆಗೆ ಆಗಸ್ಟ್ 31 ಅಂತಿಮ ದಿನವಾಗಿದೆ. ಆಧಾರ್‌ನೊಂದಿಗೆ ಜೋಡಣೆಯಾಗದ ಪಾನ್‌ ಕಾರ್ಡ್‌ಗಳು ಸೆಪ್ಟೆಂಬರ್ 1ರಿಂದ ಅಮಾನ್ಯಗೊಳ್ಳಲಿವೆ ಎಂದು ಸರಕಾರ ತಿಳಿಸಿದೆ.

 ಈಗ ದೇಶದಲ್ಲಿ ಒಟ್ಟು 400 ಮಿಲಿಯನ್ ಪಾನ್‌ ಕಾರ್ಡ್‌ಗಳಿದ್ದು, ಇದರಲ್ಲಿ 180 ಮಿಲಿಯನ್ ಪಾನ್‌ಕಾರ್ಡ್‌ಗಳು ಆಧಾರ್‌ನೊಂದಿಗೆ ಜೋಡಣೆಗೊಂಡಿಲ್ಲ. ಆಗಸ್ಟ್ 31ರೊಳಗೆ ಆಧಾರ್‌ ಕಾರ್ಡ್‌ನೊಂದಿಗೆ ಪಾನ್‌ಕಾರ್ಡನ್ನು ಸಂಪರ್ಕಿಸಬೇಕು. ಸಂಪರ್ಕಿಸದ ಪಾನ್‌ಕಾರ್ಡನ್ನು ಅಮಾನತಿನಲ್ಲಿರಿಸಲಾಗುವುದು. ಇದನ್ನು ಆಧಾರ್‌ನೊಂದಿಗೆ ಜೋಡಿಸಿಕೊಂಡ ಬಳಿಕ ಮತ್ತೆ ಸಕ್ರಿಯಗೊಳಿಸಲಾಗುತ್ತದೆ ಎಂದು ವಿತ್ತ ಸಚಿವಾಲಯದ ಮೂಲಗಳು ಹೇಳಿವೆ.

 ಆದರೆ, ತೆರಿಗೆ ಪಾವತಿಸಲು ಪಾನ್‌ ಕಾರ್ಡ್ ಬದಲು ಆಧಾರ್ ಕಾರ್ಡ್ ಬಳಸಬಹುದಾಗಿದೆ. ಸೆಪ್ಟೆಂಬರ್ 1ರ ಬಳಿಕ ತೆರಿಗೆ ಪಾವತಿ ಹಾಗೂ ಇತರ ನಿರ್ದಿಷ್ಟ ವ್ಯವಹಾರಗಳಿಗೆ ಪ್ಯಾನ್‌ಕಾರ್ಡ್‌ಗೆ ಸಂಪರ್ಕವಾಗದ ಆಧಾರ್ ಕಾರ್ಡ್ ಬಳಸಿದರೆ, ಅವರಿಗೆ ಆದಾಯತೆರಿಗೆ ಇಲಾಖೆಯಿಂದ ಹೊಸ ಪ್ಯಾನ್‌ನಂಬರ್ ದೊರೆಯುತ್ತದೆ. ಇವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

 ಅಲ್ಲದೆ ತೆರಿಗೆ ಪಾವತಿ ಹಾಗೂ ಇತರ ನಿರ್ದಿಷ್ಟ ವ್ಯವಹಾರಗಳಿಗೆ ಸಲ್ಲಿಕೆಯಾಗುವ ಯಾವುದೇ ದಾಖಲೆಪತ್ರಗಳಲ್ಲಿ ಆಧಾರ್ ಕಾರ್ಡ್ ನಂಬರ್ ಅಥವಾ ಪಾನ್‌ಕಾರ್ಡ್ ನಂಬರ್ ಸಮರ್ಪಕವಾಗಿದೆ ಎಂಬುದನ್ನು ದೃಢೀಕರಿಸುವ ಜವಾಬ್ದಾರಿ ಆ ದಾಖಲೆಪತ್ರಗಳನ್ನು ಸ್ವೀಕರಿಸುವ ಅಧಿಕಾರಿಗಳದ್ದಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News