ಆದಿವಾಸಿಗಳ ಮೇಲೆ ಪೆಲೆಟ್ ಗುಂಡು ಹಾರಿಸಿದ ಮಧ್ಯಪ್ರದೇಶದ ಅರಣ್ಯಾಧಿಕಾರಿಗಳು

Update: 2019-07-11 17:55 GMT

ಭೋಪಾಲ್, ಜು. 11: ಬುರ್ಹಾನ್‌ಪುರದ ಸಿವಾಲ್ ಗ್ರಾಮದಲ್ಲಿ ಜುಲೈ 9ರಂದು ನಡೆದ ತೆರವು ಕಾರ್ಯಾಚರಣೆ ವಿರೋಧಿಸಿದ ಆದಿವಾಸಿ ರೈತರ ಮೇಲೆ ಮಧ್ಯಪ್ರದೇಶ ಅರಣ್ಯ ಅಧಿಕಾರಿಗಳು ಪೆಲೆಟ್ ಗುಂಡು ಹಾರಿಸಿದ್ದಾರೆ. ಇದರಿಂದ ನಾಲ್ವರು ಆದಿವಾಸಿಗಳು ಗಾಯಗೊಂಡಿದ್ದಾರೆ.

ಓರ್ವರನ್ನು ಇಂದೋರ್‌ನ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ಈ ಸಮುದಾಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಹೋರಾಟಗಾರರೊಬ್ಬರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಅಧಿಕಾರಿಗಳು ಕೂಡ ಗಾಯಗೊಂಡಿದ್ದಾರೆ. ಗ್ರಾಮ ನಿವಾಸಿಗಳು ಅವರ ಮೇಲೆ ಕಲ್ಲೆಸೆದ ಪರಿಣಾಮ ಅವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭ ಈ ಹಿಂಸಾಚಾರ ನಡೆದಿದೆ. ಇದು ಅಕ್ರಮ ತೆರವು ಕಾರ್ಯಾಚರಣೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಅರಣ್ಯ ಕಾಯ್ದೆ ಅಡಿ ಸಾಂಪ್ರದಾಯಿಕ ಅರಣ್ಯಭೂಮಿ ಎಂದು ಪ್ರತಿಪಾದಿಸಿ 10 ಲಕ್ಷಕ್ಕೂ ಅಧಿಕ ಅರಣ್ಯವಾಸಿ ಕುಟುಂಬಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟ್ ಈ ಮನವಿ ತಿರಿಸ್ಕರಿಸಿ ಒತ್ತುವರಿ ತೆರವುಗೊಳಿಸುವಂತೆ ಫೆಬ್ರವರಿ 13ರಂದು ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News