BREAKING NEWS: ರಾಜೀನಾಮೆ ಪರ್ವ: ಯಥಾಸ್ಥಿತಿ ಕಾಪಾಡಲು ಸುಪ್ರೀಂಕೋರ್ಟ್ ನಿರ್ದೇಶನ

Update: 2019-07-12 07:56 GMT

ಹೊಸದಿಲ್ಲಿ, ಜು. 12: ಸಾಂವಿಧಾನಿಕ ಪೀಠ ಸ್ಪೀಕರ್‌ಗೆ ನಿರ್ದೇಶನ ನೀಡಬೇಕೇ, ಬೇಡವೇ?ಎಂಬ ಪ್ರಶ್ನೆ ಉದ್ಭವವಾಗಿದೆ. ನಿರ್ದೇಶನ ನೀಡುವ ಪರಿಸ್ಥಿತಿ ನಮ್ಮ ಮುಂದಿದೆ ಎಂದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್, ಯಥಾಸ್ಥಿತಿ ಮುಂದುವರಿಕೆಗೆ ನಿದೇಶನ ನೀಡಿದ್ದಾರೆ.

ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸುವಂತಿಲ್ಲ. ಅನರ್ಹತೆ ಮಾಡುವಂತಿಲ್ಲ ಎಂದಿರುವ ನ್ಯಾಯಾಲಯ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆೆ. ಮಂಗಳವಾರ ಅರ್ಜಿಯ ವಿಸ್ತೃತ ವಿಚಾರಣೆ ನಡೆಯಲಿದೆ. ಸ್ಪೀಕರ್‌ಗೆ ಮಂಗಳವಾರದ ತನಕ ಕಾಲಾವಕಾಶ ನೀಡಲಾಗಿದೆ. ಸುಪ್ರೀಂ ಆದೇಶದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಮಂಗಳವಾರದ ತನಕ ಅತಂತ್ರ ಪರಿಸ್ಥಿತಿ ಮುಂದುವರಿದಿದೆ. ವಿಪ್ ಉಲ್ಲಂಘನೆ ಭೀತಿಯಿಂದ ಅತೃಪ್ತ ಶಾಸಕರು ಸದ್ಯಕ್ಕೆ ಬಚಾವಾಗಿದ್ದಾರೆ.

‘‘ಇದು ರಾಜಕೀಯ ಪ್ರೇರಿತ ದೂರು. ಅತೃಪ್ತರ ಅರ್ಜಿ ಆಧರಿಸಿದ ಆದೇಶ ನೀಡಬೇಡಿ. ದುರಾಡಳಿತ, ಭ್ರಷ್ಟಾಚಾರಗಳಿಗೆ ಬೇಸತ್ತು ರಾಜೀನಾಮೆ ನೀಡಿದ್ದಾಗಿ ಅತೃಪ್ತರು ಹೇಳುತ್ತಿದ್ದಾರೆ. ಈ ಕುರಿತು ಸ್ಪೀಕರ್ ವಿಚಾರಣೆ ನಡೆಸಬೇಕಾಗಿದೆ. ನಮ್ಮ ಸರಕಾರ ಯಾವುದೆ ಹಗರಣದಲ್ಲಿ ಭಾಗಿಯಾಗಿಲ್ಲ’’ಎಂದು ಕರ್ನಾಟಕ ಸಿಎಂ ಪರ ವಕೀಲ ರಾಜೀವ್ ಧವನ್ ಹೇಳಿದ್ದಾರೆ.

 ಕಾಲಮಿತಿಯಲ್ಲಿ ರಾಜೀನಾಮೆ ಬಗ್ಗೆ ನಿರ್ಧರಿಸುವಂತೆ ಆದೇಶಿಸಬೇಡಿ. ನನಗೆ ಸಾಕಷ್ಟು ಕಾಲಾವಕಾಶಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರು ಮನವಿ ಮಾಡಿದರು.

ಶಾಸಕರು ರಾಜೀನಾಮೆ ನೀಡಿದ ಮೇಲೆ ವಿಪ್ ಜಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ. ಸದಸ್ವತ್ವ ಅನರ್ಹ ಮಾಡಬೇಕೆಂದೇ ವಿಪ್ ನಿಡಲಾಗಿದೆ. ಅನರ್ಹತೆ ಅರ್ಜಿಗೂ ಮೊದಲೇ 8 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೊಸದಾಗಿ ರಾಜೀನಾಮೆ ನೀಡಿದವರ ಅರ್ಜಿ ಯಾಕೆ ಅಂಗೀಕರಿಸಿಲ್ಲ. ಉದ್ದೇಶಪೂರ್ವಕವಾಗಿ ವಿಪ್ ಜಾರಿ ಮಾಡಲಾಗಿದೆ ಎಂದು ಅತೃಪ್ತರ ಪರ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News