×
Ad

ವಿಐಪಿ ನಂ.‘0001’ಕ್ಕಾಗಿ 5.51 ಲ.ರೂ. ವ್ಯಯಿಸಿದ ಶಾಸಕ

Update: 2019-07-12 21:20 IST

ಡೆಹ್ರಾಡೂನ್,ಜು.12: ಎರಡೂ ಕೈಗಳಲ್ಲಿ ರಿವಾಲ್ವರ್ ಹಿಡಿದುಕೊಂಡು ಮದ್ಯ ಸೇವಿಸುತ್ತ ಡ್ಯಾನ್ಸ್ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಗುರುವಾರ ಪಕ್ಷದಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಂಡಿರುವ ಉತ್ತರಾಖಂಡದ ಬಿಜೆಪಿ ಶಾಸಕ ಕುಂವರ ಪ್ರಣವ ಚಾಂಪಿಯನ್ ಅವರು ಇತ್ತೀಚಿಗೆ ತನ್ನ ವಾಹನಕ್ಕೆ ವಿಐಪಿ ನಂ.’0001’ ಅನ್ನು ಪಡೆದುಕೊಳ್ಳಲು 5.51 ಲ.ರೂ.ಗಳನ್ನು ವ್ಯಯಿಸಿದ್ದರು.

  ಚಾಂಪಿಯನ್ ಪಾವತಿಸಿರುವ ಹಣವು ಡೆಹ್ರಾಡೂನ್ ಪ್ರದೇಶದಲ್ಲಿ ವಿಐಪಿ ನಂಬರ್‌ಗಾಗಿ ಕಳೆದೆರಡು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. 2017,ಜೂನ್‌ನಲ್ಲಿ ವಿಐಪಿ ನಂಬರ್‌ಗಳ ಹಂಚಿಕೆ ಪ್ರಕ್ರಿಯೆ ಆನ್‌ಲೈನ್ ಆದ ಬಳಿಕ ಇತರ ಹಲವಾರು ಜನರೂ ಈ ನಂಬರ್‌ಗಳಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ ಎಂದು ಹೆಚ್ಚುವರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅರವಿಂದ ಪಾಂಡೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

 5.25 ಲ.ರೂ.ಗಳ ಅತ್ಯಂತ ಹೆಚ್ಚಿನ ಬಿಡ್ ಮಾಡಿದ ಹಿಂದಿನ ದಾಖಲೆ ಆಪ್ ಅಭ್ಯರ್ಥಿಯಾಗಿ ಡೆಹ್ರಾಡೂನ್ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ತೃತೀಯ ಲಿಂಗಿ ನಾಯಕಿ ರಜನಿ ರಾವತ್ ಹೆಸರಿನಲ್ಲಿತ್ತು. ಅವರು ಡಿಎಲ್ ಸರಣಿಯಲ್ಲಿ ವಿಐಪಿ ನಂ.0001 ಅನ್ನು ಪಡೆದಿದ್ದರು. 1.13 ಲ.ರೂ.ಗಳ ಬಿಡ್‌ಗೆ 0007 ನಂಬರ್ ಕೂಡ ಅವರಿಗೆ ಒಲಿದಿತ್ತು.

ರಾಜ್ಯ ಸಾರಿಗೆ ಇಲಾಖೆಯು ಪ್ರತಿ ತಿಂಗಳು ಎರಡು ಬಾರಿ ವಿಐಪಿ ನಂಬರ್‌ಗಳ ಹರಾಜು ನಡೆಸುತ್ತದೆ. ಯುಕೆ 07 ಡಿಎನ್ ಸರಣಿಯಲ್ಲಿ 0001 ನಂಬರ್‌ಗಾಗಿ ಚಾಂಪಿಯನ್ ಅತ್ಯಂತ ಹೆಚ್ಚಿನ ಮೊತ್ತದ ಬಿಡ್ ಸಲ್ಲಿಸಿದ್ದರು. ಪ್ರತಿ ಸರಣಿಯಲ್ಲಿಯೂ 0001 ಅತ್ಯಂತ ಹೆಚ್ಚಿನ ಬೇಡಿಕೆಯ ನಂಬರ್ ಆಗಿದ್ದರೆ,0007 ನಂತರದ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News