ವೆಲ್ಲೂರಿನಿಂದ ಚೆನ್ನೈ ತಲುಪಿದ ವಿಶೇಷ ನೀರು ಸಾಗಾಟ ರೈಲು

Update: 2019-07-12 17:31 GMT

ಚೆನ್ನೈ, ಜು. 12: ಸುಮಾರು 25 ಲಕ್ಷ ಲೀಟರ್ ನೀರನ್ನು ಹೊಂದಿದ ವಿಶೇಷ 50 ವ್ಯಾಗನ್‌ಗಳ ರೈಲು ಶುಕ್ರವಾರ ಬೆಳಗ್ಗೆ ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟ್‌ನಿಂದ ಪ್ರಯಾಣ ಆರಂಭಿಸಿ ಅಪರಾಹ್ನ ಚೆನ್ನೈಗೆ ತಲುಪಿದೆ.

ರಾತ್ರಿ 1 ಗಂಟೆಗೆ ವ್ಯಾಗನ್‌ಗಳಿಗೆ ನೀರು ತುಂಬಿಸಲು ಆರಂಭಿಸಲಾಯಿತು 7.10ಕ್ಕೆ ರೈಲು ನಿರ್ಗಮಿಸಿತು. ಈ ರೈಲು 12 ಗಂಟೆಗೆ ಚೆನ್ನೈಯ ವಿಲ್ಲಿವಿಕ್ಕಮ್ ನಿಲ್ದಾಣಕ್ಕೆ ತಲುಪಿತು. ಸಚಿವರು ಈ ರೈಲನ್ನು ಬರ ಮಾಡಿಕೊಂಡರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನ 50 ವ್ಯಾಗನ್‌ಗಳಲ್ಲಿ 55 ಸಾವಿರ ಲೀಟರ್ ನೀರು ಸಾಗಿಸಲಾಗಿದೆ. ಚೆನ್ನೈ ನಗರದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚೆನ್ನೈಯ ನೀರಿನ ಅಗತ್ಯ ಪೂರೈಸಲು ಜೋಲಾರ್‌ಪಟ್ಟ್ಟೈಯಿಂದ ದಿನಂಪ್ರತಿ 1 ಕೋಟಿ ಲೀಟರ್ ನೀರನ್ನು ಸಾಗಾಟ ಮಾಡುವ ಯೋಜನೆಯನ್ನು ರಾಜ್ಯ ಸರಕಾರ ಹೊಂದಿದೆ ಎಂದು ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News