ಎಸ್ ಬಿಐ ಗ್ರಾಹಕರಿಗೆ ಸಿಹಿಸುದ್ದಿ !

Update: 2019-07-12 18:24 GMT

ಹೊಸದಿಲ್ಲಿ, ಜು.12: ಅಂತರ್ಜಾಲ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ನಡೆಸುವ ನೆಫ್ಟ್ ಮತ್ತು ಆರ್‌ಟಿಜಿಎಸ್ ವ್ಯವಹಾರಗಳ ಮೇಲಿನ ಶುಲ್ಕವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಜುಲೈ 1ರಿಂದ ರದ್ದುಗೊಳಿಸಿದೆ.

ದೇಶವನ್ನು ನಗದುರಹಿತ ಆರ್ಥಿಕತೆ ಮಾಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆನ್‌ಲೈನ್ ಹಣ ವರ್ಗಾವಣೆ ಮೇಲಿನ ಶುಲ್ಕಗಳನ್ನು ರದ್ದುಗೊಳಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಎಸ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ರಿಯಲ್ ಟೈಮ್ ಗ್ರೋಸ್ ಸೆಟಲ್ಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆ ದೊಡ್ಡ ಪ್ರಮಾಣದ ಮೊತ್ತದ ತಕ್ಷಣದ ವರ್ಗಾವಣೆಗೆ ಬಳಸಲ್ಪಟ್ಟರೆ ನ್ಯಾಶನಲ್ ಎಲೆಕ್ಟ್ರೋನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) 2 ಲಕ್ಷ ರೂ.ವರೆಗೆ ಹಣ ವರ್ಗಾವಣೆ ಮಾಡಲು ಬಳಸಲಾಗುತ್ತದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್‌ಬಿಐ, ಡಿಜಿಟಲ್ ಗಣ ಚಲಾವಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಸ್‌ಬಿಐ, ಯೊನೊ, ಅಂತರ್ಜಾಲ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ನಡೆಸುವ ಆರ್‌ಟಿಜಿಎಸ್ ಮತ್ತು ನೆಫ್ಟ್ ಗ್ರಾಹಕರ ಶುಲ್ಕವನ್ನು ಜುಲೈ 1ರಿಂದ ರದ್ದುಗೊಳಿಸಿದೆ. ಜೊತೆಗೆ ಐಎಂಪಿಎಸ್ ಶುಲ್ಕಗಳನ್ನು ಆಗಸ್ಟ್ 1ರಿಂದ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಜುಲೈ ಒಂದಕ್ಕೂ ಮೊದಲು ಎಸ್‌ಬಿಐ ನೆಫ್ಟ್ ವರ್ಗಾವಣೆಗೆ 1ರಿಂದ 5ರೂ. ಹಾಗೂ ಆರ್‌ಟಿಜಿಎಸ್ ವರ್ಗಾವಣೆಗೆ 5ರಿಂದ 50ರೂ. ಶುಲ್ಕ ವಿಧಿಸುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News