ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕ ಗೋವಾದ ಉಪ ಮುಖ್ಯಮಂತ್ರಿ!

Update: 2019-07-13 05:02 GMT
ಚಂದ್ರಕಾಂತ್ ಕವ್ಳೇಕರ್

ಪಣಜಿ, ಜು.13: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ತನ್ನ ಸಂಪುಟದಿಂದ ನಾಲ್ವರು ಸಚಿವರುಗಳನ್ನು ಕೈಬಿಟ್ಟಿದ್ದಲ್ಲದೆ, ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ 10 ಶಾಸಕರಿಗೆ ಸಚಿವ ಸ್ಥಾನ ನೀಡಲು ಏಳು ಹೊಸ ಸಚಿವ ಖಾತೆಯನ್ನು ತೆರೆದಿದ್ದಾರೆ.

ಗೋವಾದ ವಿಧಾನಸಭೆಯ ಮಾಜಿ ವಿಪಕ್ಷ ನಾಯಕ ಚಂದ್ರಕಾಂತ್ ಕವ್ಳೇಕರ್ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಗೋವಾ ಸಿಎಂ ಸಾವಂತ್ ಖಚಿತಪಡಿಸಿದರು.

ಎನ್‌ಡಿಎ ಮೈತ್ರಿಕೂಟ ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ ಸರ್‌ದೇಸಾಯಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ.

‘‘ಗೋವಾ ಫಾರ್ವರ್ಡ್ ಪಕ್ಷದ ಸಚಿವರು ಹಾಗೂ ಪಕ್ಷೇತರ ರೋಹನ್ ಕೌಂಟೆಗೆ ರಾಜೀನಾಮೆ ನೀಡುವಂತೆ ನಾನು ಸೂಚನೆ ನೀಡಿದ್ದೇನೆ. ಹೊಸತಾಗಿ ಸಚಿವ ಸಂಪುಟ ಸೇರಿರುವ ಚಂದ್ರಕಾಂತ್ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’’ಎಂದು ಸಾವಂತ್ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News