ರೈಲ್ವೇಸ್‌ ಆಧುನೀಕರಣಕ್ಕೆ ಖಾಸಗಿ ಹೂಡಿಕೆಯ ಅಗತ್ಯವಿದೆ: ಗೋಯಲ್

Update: 2019-07-13 05:22 GMT

ಹೊಸದಿಲ್ಲಿ, ಜು.13: ವಿಪಕ್ಷಗಳ ಟೀಕೆಗಳನ್ನು ತಳ್ಳಿ ಹಾಕಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ರೈಲ್ವೇಸ್‌ನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಲೋಕಸಭೆಯಲ್ಲಿ ರೈಲ್ವೇಸ್‌ಗೆ ಅನುದಾನದ ಬೇಡಿಕೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಗೋಯಲ್, ‘‘ರೈಲ್ವೇಸ್‌ನ್ನು ಆಧುನೀಕರಣಗೊಳಿಸಲು ಖಾಸಗಿ ಹೂಡಿಕೆಯ ಅಗತ್ಯವಿದೆ’’ ಎಂದಿದ್ದಾರೆ.

‘‘ರೈಲ್ವೇಸ್‌ನ್ನು ಖಾಸಗೀಕರಣಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ, ರೈಲ್ವೇಗಳ ಸೌಕರ್ಯ ಗಳನ್ನು ಹೆಚ್ಚಿಸಲು ಮುಂದಾಗಬೇಕಾದರೆ, ನಮಗೆ ಬಂಡವಾಳದ ಅಗತ್ಯವಿರುತ್ತದೆ. ..ಹೊಸ ಯೋಜನೆ ಗಳಿಗಾಗಿ ರಾಷ್ಟ್ರೀಯ ಹಿತದೃಷ್ಟಿಯಿಂದ ಹೂಡಿಕೆದಾರರನ್ನು ಆಹ್ವಾನಿಸಬೇಕಾಗುತ್ತದೆ. ಸರಕಾರಿ ಹಾಗೂ ಖಾಸಗಿ ಪಾಲುದಾರಿಕೆಗೆ ಉತ್ತೇಜನ ನೀಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News