×
Ad

ಗೋವಾ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ : ಆರೆಸ್ಸೆಸ್ ಕಾರ್ಯಕರ್ತರ ಅಸಮಾಧಾನ

Update: 2019-07-13 12:40 IST

ಪಣಜಿ, ಜು.13: ಇತ್ತೀಚೆಗೆ ಕಾಂಗ್ರೆಸ್‌ನ 10 ಶಾಸಕರು ಸೇರ್ಪಡೆಯಾದ ಹಿನ್ನೆಲೆಯಲ್ಲಿ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಬಲ 17ರಿಂದ 27ಕ್ಕೆ ಏರಿಕೆಯಾಗಿದೆ. ಆದರೆ, ುಕಾಂಗ್ರೆಸ್ ಶಾಸಕರನ್ನು ಪಕ್ಷದ ಸೇರಿಸಿಕೊಂಡಿರುವ ಆಡಳಿತ ಪಕ್ಷದ ನಿಲುವಿನ ಬಗ್ಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ. ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ತಮಗೆ ಈ ಬೆಳವಣಿಗೆಯಿಂದ ತುಂಬಾ ನಿರಾಶೆಯಾಗಿದೆ ಎಂದು ಕೆಲವು ಹೇಳಿದ್ದಾರೆ.

  ‘‘ನನಗೆ ತುಂಬಾ ಬೇಸರವಾಗಿದೆ. ಬಿಜೆಪಿ ಹಾಗೂ ಸಂಪುಟಕ್ಕೆ ಕಾಂಗ್ರೆಸ್ ಶಾಸಕರನ್ನು ಸೇರಿಸಿಕೊಳ್ಳುವ ಯೋಚನೆ ನನಗೆ ಇಷ್ಟವಾಗಿಲ್ಲ. ಅವರೆಲ್ಲರೂ ಸ್ವಾರ್ಥಿಗಳು. ನಮ್ಮ ಬಾಸ್‌ಗಳು ಜನರನ್ನು ಭೇಟಿಯಾಗುವುದಿಲ್ಲ. ನಾವು ಅವರನ್ನು ಎದುರಿಸಬೇಕಾಗುತ್ತದೆ. ಮತಕ್ಕಾಗಿ ಹಾಗೂ ಸದಸ್ವತ್ವಕ್ಕಾಗಿ ನಾವು ಜನರನ್ನು ಸಂಪರ್ಕಿಸಬೇಕಾಗುತ್ತದೆ. ನನ್ನ ತತ್ವದೊಂದಿಗೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಪಕ್ಷದ ಈ ನಿಲುವಿಗೆ ನನ್ನ ವಿರೋಧವಿದೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ಬಿಜೆಪಿ ಇತರ ಪಕ್ಷಗಳಿಗಿಂತ ಹೇಗೆ ಭಿನ್ನವಾಗಿರಲು ಸಾಧ್ಯ’’ ಎಂದು ಆರ್‌ಎಸ್‌ಎಸ್ ಕಾರ್ಯಕರ್ತ ಸುಮಂತ್ ಜೋಗ್ಲೆಕರ್ ಹೇಳಿದ್ದಾರೆ.

‘‘ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಮತ ಹಾಕಿದ್ದೆ. ಕಾಂಗ್ರೆಸ್ ಶಾಸಕರು ದಿಢೀರನೆ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಬೇಸರವಾಗಿದೆ. ಸೇರ್ಪಡೆಯಾಗಿರುವ ಓರ್ವ ಶಾಸಕನ ಮೇಲೆ ಅತ್ಯಾಚಾರ ಪ್ರಕರಣವಿದೆ. ಆತನ ಮೇಲೆ ಚಾರ್ಜ್‌ಶೀಟ್ ದಾಖಲಾಗಿದೆ. ಇದೀಗ ಆತನನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಲ್ಲದೆ ಸಚಿವ ಸ್ಥಾನವನ್ನೂ ನೀಡಲಾಗಿದೆ’’ ಎಂದು ಹಿರಿಯ ಪತ್ರಕರ್ತ ಅರವಿಂದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News