ಚಾಲಕರ ಲೈಸೆನ್ಸ್ ದತ್ತಾಂಶ 65 ಕೋ.ರೂ.ಗೆ 87 ಖಾಸಗಿ ಕಂಪೆನಿಗಳಿಗೆ ಮಾರಾಟ: ನಿತಿನ್ ಗಡ್ಕರಿ

Update: 2019-07-13 17:40 GMT

 ಹೊಸದಿಲ್ಲಿ, ಜು. 13: ಕೇಂದ್ರ ಸರಕಾರ ಚಾಲಕರ ಪರವಾನಿಗೆ ದತ್ತಾಂಶವನ್ನು 87 ಖಾಸಗಿ ಕಂಪೆನಿಗಳಿಗೆ 65 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಪ್ರಜೆಗಳ ಬೃಹತ್ ಪ್ರಮಾಣದ ವಾಹನ ನೋಂದಣಿ ಹಾಗೂ ಚಾಲನಾ ಪರವಾನಿಗೆಯ ದತ್ತಾಂಶವನ್ನು ಕೇಂದ್ರ ಸರಕಾರ ವಿವಿಧ ಖಾಸಗಿ ಹಾಗೂ ಸರಕಾರಿ ಕಂಪೆನಿಗಳಿಗೆ ಮಾರಾಟ ಮಾಡುತ್ತಿದೆ. ಈ ವರ್ಷದಲ್ಲಿ ಯಾವುದೇ ಕಂಪೆನಿ ಈ ದತ್ತಾಂಶವನ್ನು 6 ಕೋಟಿ ರೂಪಾಯಿ ನೀಡಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ)ದ ಮೂಲಕ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಿಂದ ನಿರ್ವಹಣೆಯಾಗುತ್ತಿರುವ ಸಾಗಾಟಕ್ಕಿರುವ ಕೇಂದ್ರೀಕೃತ ರಾಷ್ಟ್ರೀಯ ನೋಂದಣಿಯಲ್ಲಿ 25 ಕೋಟಿ ವಾಹನ ನೋಂದಣಿ ದಾಖಲೆ ಹಾಗೂ ಸರಿಸುಮಾರು 15 ಕೋಟಿ ಚಾಲನಾ ಪರವಾನಿಗೆಯ ದಾಖಲೆಗಳು ಇವೆ.

   ಬೃಹತ್ ಪ್ರಮಾಣದ ವಾಹನ ನೋಂದಣಿಯ ದತ್ತಾಂಶದಲ್ಲ್ಲಿ ನಿರ್ದಿಷ್ಟ ಕ್ಷೇತ್ರದ ದತ್ತಾಂಶವನ್ನ್ನು ಹಂಚಿಕೊಳ್ಳಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ‘ಬೃಹತ್ ಪ್ರಮಾಣದ ದತ್ತಾಂಶ ಹಂಚಿಕೆ ನೀತಿ ಹಾಗೂ ಪ್ರಕ್ರಿಯೆ’ಯನ್ನು ರೂಪಿಸಿದೆ. ಬೃಹತ್ ಪ್ರಮಾಣದ ದತ್ತಾಂಶವನ್ನು ಕೋರುವ ಸಂಸ್ಥೆ 2019-20ಕ್ಕೆ 3 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸಭೆಗೆ ತಿಳಿಸಿದರು.

ಕಾಂಗ್ರೆಸ್ ಸಂಸದ ಹುಸೈನ್ ದಲ್ವಾಯಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಡ್ಕರಿ, ಇಂದು 87 ಖಾಸಗಿ ಹಾಗೂ 32 ಸರಕಾರಿ ಸಂಸ್ಥೆಗಳಿಗೆ ವಾಹನ ಹಾಗೂ ಸಾರಥಿ ದತ್ತಾಂಶವನ್ನು ಪೂರೈಸುವ ಮೂಲಕ ಕೇಂದ್ರ ಸರಕಾರ ಇದುವರೆಗೆ 65 ಕೋಟಿ ರೂಪಾಯಿ ಗಳಿಸಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News