ದಲಿತರ ಕೂದಲು ತೆಗೆಯಲು ನಿರಾಕರಿಸುತ್ತಿರುವ ಮುಸ್ಲಿಮ್ ಕ್ಷೌರಿಕರು !

Update: 2019-07-13 18:16 GMT
ಸಾಂದರ್ಭಿಕ ಚಿತ್ರ

 ಮೊರದಾಬಾದ್, ಜು. 13: ಹಿಂದೆ 'ಹಜಾಮ್' ಎಂದು ಕರೆಯಲಾಗುತ್ತಿದ್ದ ಮುಸ್ಲಿಮರ ಸಲ್ಮಾನಿ ಸಮುದಾಯ ದಲಿತರ ಕೂದಲು ಕತ್ತರಿಸಲು ಹಾಗೂ ಗಡ್ಡ ತೆಗೆಯಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಮೊರದಾಬಾದ್ ಜಿಲ್ಲೆಯ ಭೋಜ್‌ಪುರದ ದಲಿತರು ಪೊಲೀಸ್ ಅಧಿಕಾರಿಗಳಲ್ಲಿ ದೂರು ನೀಡಿದ್ದಾರೆ.

 “ಸಲ್ಮಾನಿ ಸಮುದಾಯ ನಮ್ಮನ್ನು ಅಸ್ಪೃಶರಂತೆ ಪರಿಗಣಿಸುವುದನ್ನು ಮುಂದುವರಿಸಿದೆ” ಎಂದು ಆರೋಪಿಸಿ ಪೀಪಾಲ್ಸಾನಾ ಗ್ರಾಮದಲ್ಲಿ ವಾಸಿಸುತ್ತಿರುವ ದಲಿತರು ಮೊರದಾಬಾದ್ ಎಸ್‌ಎಸ್‌ಪಿಗೆ ದೂರು ನೀಡಿದ್ದಾರೆ.

ಇದು ದಶಕಗಳಿಂದ ನಡೆಯುತ್ತಿದೆ. ಆದರೆ, ಅಸ್ಪೃಶತೆಯನ್ನು ಮುಂದುವರಿಸುವ ಈ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಲು ನಾವು ಈಗ ನಿರ್ಧರಿಸಿದ್ದೇವೆ ಎಂದು ಗ್ರಾಮದ ದಲಿತ ರಾಕೇಶ್ ಕುಮಾರ್ ಹೇಳಿದ್ದಾರೆ.

“ಸಲ್ಮಾನಿ ಸಮುದಾಯ ನಮ್ಮ ಕೂದಲು ತೆಗೆಯಲು ನಿರಾಕರಿಸುತ್ತಿದ್ದುದರಿಂದ ನಮ್ಮ ಅಜ್ಜ ಹಾಗೂ ತಂದೆ ಭೋಜಪುರ ನಗರಕ್ಕೆ ಹೋಗುತ್ತಿದ್ದರು” ಎಂದು ಅವರು ಹೇಳಿದ್ದಾರೆ. ಈ ನಡುವೆ ದಲಿತರು ಎಸ್‌ಎಸ್‌ಪಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಸಲ್ಮಾನಿ ಸಮುದಾಯ ಶುಕ್ರವಾರ ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿತು. “ನಾವು ದೂರು ಸ್ವೀಕರಿಸಿದ್ದೇವೆ. ಈ ವಿಷಯದ ಕುರಿತು ತನಿಖೆಗೆ ಆದೇಶಿಸಿದ್ದೇವೆ” ಎಂದು ಮೊರದಾಬಾದ್‌ನ ಹಿರಿಯ ಪೊಲೀಸ್ ಅಧೀಕ್ಷಕ ಅಮಿತ್ ಪಾಠಕ್ ಹೇಳಿದ್ದಾರೆ. ಆರೋಪ ಸತ್ಯವಾಗಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಪಾಠಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News