ಮಣಿಪುರ:ಉಗ್ರನ ಬಂಧನ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

Update: 2019-07-13 18:37 GMT

ಸೊಭಾವತಿ, ಜು. 13: ಭಾರತೀಯ ಸೇನೆ ಮಣಿಪುರದ ನೋನೆ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎನ್‌ಎಸ್‌ಸಿಎನ್ (ಐಎಂ)ನ ಉಗ್ರನೋರ್ವನನ್ನು ಬಂಧಿಸಿದೆ ಹಾಗೂ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಸೇನಾ ಕಾರ್ಯಾಚರಣೆ ಜುಲೈ 5ರಂದು ರಾತ್ರಿ ಆರಂಭವಾಯಿತು. ಮರು ದಿನ ಬೆಳಗ್ಗೆ ನೋನೆ ಜಿಲ್ಲೆಯ ಕೆಕ್ರು ನಾಗಾ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭವಾಯಿತು ಎಂದು 57 ಮೌಂಟೈನ್ ಡಿವಿಜನ್‌ನ ಬ್ರಿಗೇಡಿಯರ್ ರವರೂಪ್ ಸಿಂಗ್ ಹೇಳಿದ್ದಾರೆ.

  ಭದ್ರತಾ ಪಡೆಯ ಕಾರ್ಯಾಚರಣೆ ಆರಂಭಿಸಿರುವುದು ಗಮನಕ್ಕೆ ಬರುತ್ತಿದ್ದಂತೆ ಎನ್‌ಎಸ್‌ಸಿಎನ್ (ಐಎಂ) ಉಗ್ರರು ಪರಾರಿಯಾದರು ಹಾಗೂ ಅರಣ್ಯದ ಸಮೀಪ, ಗ್ರಾಮದ ಪರಿಧಿಯ ವಿವಿಧ ಸ್ಥಳಗಳಲ್ಲಿ ಇರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟರು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಓರ್ವ ಉಗ್ರನನ್ನು ಬಂಧಿಸಲಾಯಿತು. ಆತನಿಂದ ನಾಲ್ಕು ರೈಫಲ್, ಎರಡು ಗ್ರೆನೇಡ್ ಲಾಂಚರ್ ಹಾಗೂ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News