ದುಬೈ: ಕೊಳಕು ಕಾರುಗಳಿಗೆ ಭಾರೀ ದಂಡ

Update: 2019-07-13 18:51 GMT

ದುಬೈ, ಜು. 13: ದುಬೈಯ ವಾಹನಿಗರು ಇನ್ನು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅಲ್ಲಿನ ಸಾರ್ವಜನಿಕ ರಸ್ತೆಗಳಲ್ಲಿ ಕೊಳಕಾದ ಕಾರುಗಳನ್ನು ನಿಲ್ಲಿಸಿದರೆ 500 ದಿರ್ಹಮ್ (9,332 ರೂಪಾಯಿ) ದಂಡ ಪಾವತಿಸಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದ ಕಾನೂನೊಂದನ್ನು ದುಬೈ ಮುನಿಸಿಪಾಲಿಟಿ ಜಾರಿಗೆ ತಂದಿದೆ.

ಸಾರ್ವಜನಿಕ ರಸ್ತೆಗಳಲ್ಲಿ ಇಂಥ ಕೊಳಕು ವಾಹನಗಳು ನಗರದ ಸೌಂದರ್ಯವನ್ನು ಹಾಳುಗೆಡಹುತ್ತವೆ ಎಂಬುದಾಗಿ ದುಬೈ ಮುನಿಸಿಪಾಲಿಟಿ ಟ್ವೀಟ್ ಮಾಡಿದೆ.

ಮುನಿಸಿಪಾಲಿಟಿಯ ತಪಾಸಕರು ಈಗಾಗಲೇ ನಿಲ್ಲಿಸಲಾಗಿರುವ ಕೊಳಕು ಕಾರುಗಳ ಶೋಧದಲ್ಲಿ ತೊಡಗಿದ್ದಾರೆ. ವಾಹನಗಳನ್ನು ಶುಚಿಗೊಳಿಸಲು ಮಾಲೀಕರಿಗೆ 15 ದಿನಗಳ ಗಡುವು ನೀಡುವ ನೋಟಿಸೊಂದನ್ನು ಅವರು ಕಾರಿನ ಗಾಜುಗಳಿಗೆ ಅಂಟಿಸುತ್ತಾರೆ. ಈ ಅವಧಿಯಲ್ಲಿ ವಾಹನಗಳನ್ನು ಶುಚಿಗೊಳಿಸದಿದ್ದರೆ ಅವುಗಳನ್ನು ಎಳೆದುಕೊಂಡು ಹೋಗಲಾಗುವುದು.

ಒಂದು ವೇಳೆ, ಮಾಲೀಕರು ಸಂಪರ್ಕಿಸದಿದ್ದರೆ ವಾಹನಗಳನ್ನು ಹರಾಜು ಹಾಕಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News