×
Ad

ಗೋವಾ ವಿಧಾನಸಭೆ ಉಪಸ್ಪೀಕರ್ ರಾಜೀನಾಮೆ

Update: 2019-07-14 01:20 IST

  ಪಣಜಿ, ಜು.13: ಗೋವಾ ಸರಕಾರ ಸಂಪುಟ ಪುನರಚನೆಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಉಪಸ್ಪೀಕರ್ ಮೈಕೆಲ್ ಲೋಬೊ ಶನಿವಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ನೂತನ ಸಂಪುಟದಲ್ಲಿ ತನಗೆ ಸಚಿವ ಸ್ಥಾನ ದೊರಕಿರುವುದರಿಂದ ಉಪಸ್ಪೀಕರ್ ಹುದ್ದೆಗೆ ರಾಜೀನಾಮೆಯನ್ನು ಸ್ಪೀಕರ್‌ಗೆ ಸಲ್ಲಿಸಿರುವುದಾಗಿ ಲೋಬೊ ಹೇಳಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ಸಚಿವ ಸಂಪುಟದ ನಾಲ್ವರು ಸಚಿವರನ್ನು (ಗೋವಾ ಫಾರ್ವರ್ಡ್ ಪಾರ್ಟಿಯ ಮೂವರು ಹಾಗೂ ಓರ್ವ ಪಕ್ಷೇತರ) ಕೈಬಿಟ್ಟು ಹೊಸ ಸಚಿವರನ್ನು ಸೇರ್ಪಡೆಗೊಳಿಸಿ ಸಂಪುಟವನ್ನು ಪುನರಾಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News