ವಿಶ್ವ ಚಾಂಪಿಯನ್‌ಶಿಪ್‌ಗೆ ಮುಹಮ್ಮದ್ ಅನಸ್ ಅರ್ಹತೆ

Update: 2019-07-14 06:29 GMT

ಕ್ಲಾಡ್ನೊ, ಜು.14: ಝೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಕೂಟದಲ್ಲಿ 400 ಮೀ. ಓಟದಲ್ಲಿ ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡ ಭಾರತದ ಓಟಗಾರ ಮುಹಮ್ಮದ್ ಅನಸ್ ಚಿನ್ನದ ಪದಕ ಜಯಿಸಿದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆಯನ್ನೂ ಗಿಟ್ಟಿಸಿಕೊಂಡರು.

24ರ ಹರೆಯದ ಓಟಗಾರ ಅನಸ್ 45.21 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಪೊಲ್ಯಾಂಡ್‌ನ ಒಮೆಲ್ಕೊ ರಫಲ್(46.19 ಸೆ.)ಬೆಳ್ಳಿ ಪದಕ ಜಯಿಸಿದರು. ಕಳೆದ ವರ್ಷ ದಾಖಲಿಸಿದ್ದ ತನ್ನ ರಾಷ್ಟ್ರೀಯ ದಾಖಲೆ(45.24 ಸೆ.)ಸಮಯವನ್ನು ಉತ್ತಮಪಡಿಸಿಕೊಂಡಿರುವ ಅನಸ್ ದೋಹಾದಲ್ಲಿ ಸೆ.27 ರಿಂದ ಅಕ್ಟೋಬರ್ 6ರ ತನಕ ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.

ಪುರುಷರ 400 ಮೀ.ಓಟದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು 45.30 ಸೆಕೆಂಡ್‌ನಲ್ಲಿ ಗುರಿ ತಲುಪಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News