ವಿಶ್ವಕಪ್‌ನಿಂದ ಭಾರತ ನಿರ್ಗಮನ: ಸ್ಟಾರ್ ಸ್ಪೋರ್ಟ್ಸ್‌ಗೆ ಭಾರೀ ನಷ್ಟ

Update: 2019-07-14 08:51 GMT

ಹೊಸದಿಲ್ಲಿ, ಜು.14: ಭಾರತ ಕ್ರಿಕೆಟ್ ತಂಡ ವಿಶ್ವಕಪ್‌ನ ಸೆಮಿ ಫೈನಲ್ ಹಂತದಲ್ಲೇ ಸೋತು ನಿರ್ಗಮಿಸಿರುವುದರಿಂದ ಕೋಟ್ಯಂತರ ಕ್ರೀಡಾಭಿಮಾನಿಗಳ ಹೃದಯ ಚೂರಾಗಿರುವುದಲ್ಲದೆ ಟೂರ್ನಿಯ ಅಧಿಕೃತ ಪ್ರಸಾರ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ಜೇಬಿಗೂ ಕತ್ತರಿ ಬಿದ್ದಿದೆ.

 ಭಾರತ ಟೂರ್ನಮೆಂಟ್‌ನಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಸ್ಟಾರ್‌ಸ್ಟೋರ್ಟ್ಸ್‌ಗೆ ಜಾಹೀರಾತು ಆದಾಯದಿಂದ ಬರುತ್ತಿದ್ದ 10-15 ಕೋ.ರೂ.ಕೈತಪ್ಪುವ ಸಾಧ್ಯತೆಯಿದೆ. ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆ 18 ರನ್‌ಗಳಿಂದ ಸೋತು ಟೂರ್ನಿಯಿಂದ ಹೊರ ನಡೆದ ಬಳಿಕ ವಿಶ್ವಕಪ್‌ನ ಕುತೂಹಲ ಕಡಿಮೆಯಾಗಿದೆ.ಇದು ಟಿವಿ ವೀಕ್ಷಕರ ಸಂಖ್ಯೆ ಹಾಗೂ ಜಾಹೀರಾತು ಆದಾಯದ ಮೇಲೂ ಪರಿಣಾಮ ಬೀರಲಿದೆ.

ಒಂದು ವೇಳೆ ಭಾರತ ಫೈನಲ್‌ಗೆ ತಲುಪಿದ್ದರೆ ಸ್ಟಾರ್ ಸ್ಪೋರ್ಟ್ಸ್ ಕೊನೆಯ ನಿಮಿಷದ ಆ್ಯಡ್‌ಸ್ಪಾಟ್‌ನ ಪ್ರತಿ 10 ಸೆಕೆಂಡ್‌ಗೆ 25ರಿಂದ 30 ಲಕ್ಷ ರೂ. ಚಾರ್ಜ್ ಮಾಡುತ್ತಿತ್ತು. ಈಗ 15ರಿಂದ 17ಲಕ್ಷ ರೂ. ಗೆ ಆ್ಯಡ್ ಸ್ಪಾಟ್‌ಗಳು ಮಾರಾಟವಾಗುವ ಸಾಧ್ಯತೆಯಿದೆ ಎಂದು ಲೀವ್‌ಮಿಂಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News