ಯುವರಾಜ್, ಗಂಭೀರ್,ಸೆಹ್ವಾಗ್‌ರನ್ನು ತಂಡದಿಂದ ಕೈಬಿಟ್ಟಿದ್ದು ಧೋನಿ: ಯೋಗರಾಜ್ ಸಿಂಗ್

Update: 2019-07-14 12:10 GMT

ಹೊಸದಿಲ್ಲಿ, ಜು.14: ಕಳೆದ ಕೆಲವು ದಿನಗಳಿಂದ ಯೋಗರಾಜ್ ಸಿಂಗ್ ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ಅಂಬಟಿ ರಾಯುಡು ದಿಢೀರ್ ನಿವೃತ್ತಿಗೆ ಹಾಗೂ ಭಾರತ ಸೆಮಿ ಫೈನಲ್‌ನಲ್ಲಿ ಸೋಲಲು ಧೋನಿ ಕಾರಣ ಎಂದು ದೂಷಿಸಿದ್ದ ಯೋಗರಾಜ್,ತನ್ನ ಪುತ್ರ ಯುವರಾಜ್, ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್‌ರನ್ನು ಟೀಮ್ ಇಂಡಿಯಾದಿಂದ ಕೈಬಿಡಲು ಧೋನಿಯೇ ಹೊಣೆಯಾಗಿದ್ದಾರೆ ಎಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. 2011ರ ವಿಶ್ವಕಪ್‌ನ ಬಳಿಕ ಯುವರಾಜ್ ಸಿಂಗ್ ಟೀಮ್‌ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ವಿಫಲರಾಗಿದ್ದರು. ಕ್ಯಾನ್ಸರ್‌ನಿಂದ ಬಚಾವಾದ ಬಳಿಕ ಕ್ರಿಕೆಟ್‌ಗೆ ವಾಪಸಾಗಿದ್ದ ಯುವರಾಜ್ ಫಿಟ್ನೆಸ್ ಹಾಗೂ ಫಾರ್ಮ್ ಕಾರಣದಿಂದಾಗಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಗಂಭೀರ್ ಹಾಗೂ ಸೆಹ್ವಾಗ್ ಫಾರ್ಮ್ ಕಳೆದುಕೊಂಡ ಕಾರಣದಿಂದ ಆಯ್ಕೆ ಸಮಿತಿಯು ಅವರನ್ನು ಕೈಬಿಟ್ಟಿತ್ತು.

‘‘ಎನ್.ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಧೋನಿ ಈ ಎಲ್ಲ ಕೆಲಸ ಮಾಡಿದ್ದಾರೆ. 2015ರಲ್ಲಿ ಧೋನಿ ತನ್ನ ಪ್ರಭಾವ ಬಳಸಿ ಯುವರಾಜ್ ಸಿಂಗ್‌ರನ್ನು ಕೈಬಿಟ್ಟಿದ್ದರು. ಆಗ ಫಾರ್ಮ್ ನಲ್ಲಿಲ್ಲದ ಗಂಭೀರ್ ಹಾಗೂ ಸೆಹ್ವಾಗ್‌ರನ್ನು ಕೈಬಿಟ್ಟಿದ್ದರು. ಫೀಲ್ಡಿಂಗ್ ಹಾಗೂ ಫಿಟ್ನೆಸ್ ತಂಡದಿಂದ ಕೈಬಿಡಲು ಕಾರಣ ಎಂದು ಹೇಳಲಾಗಿತ್ತು. ನಾವು 2015ರ ವಿಶ್ವಕಪ್ ಸೆಮಿಫೈನಲ್ ಹಾಗೂ 2019ರ ಸೆಮಿ ಫೈನಲ್ ಪಂದ್ಯವನ್ನು ಧೋನಿಯಿಂದಾಗಿಯೇ ಸೋತಿದ್ದೇವೆ. ಸತತ ಎರಡು ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತ ಸೋಲಲು ಕಾರಣವೇನು? ಎಂದು 61ರ ಹರೆಯದ ಯೋಗರಾಜ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News