ಅಸ್ಸಾಂನಲ್ಲಿ ಮುಂದುವರಿದ ಮಳೆ: ಮೃತರ ಸಂಖ್ಯೆ 10ಕ್ಕೆ ಏರಿಕೆ

Update: 2019-07-14 18:20 GMT

ಗುವಾಹತಿ, ಜು. 14: ಅಸ್ಸಾಂನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಸಂಬಂಧಿ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 10 ಲಕ್ಷ ಸಂತ್ರಸ್ತರರನ್ನು ಸ್ಥಳಾಂತರಗೊಳಿಸಲಾಗಿದೆ.

ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು ರಾಜ್ಯದಲ್ಲಿ 1800ಕ್ಕೂ ಅಧಿಕ ಗ್ರಾಮಗಳನ್ನು ನೆಲಸಮಗೊಂಡಿವೆ.

‘‘ಕಳೆದ ಮೂರು ದಿನಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ 10 ಜನರು ಮೃತಪಟ್ಟಿದ್ದಾರೆ. 10 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ನೆರೆ ಪರಿಸ್ಥಿತಿ ತೀವ್ರಗೊಂಡಿದೆ’’ ಎಂದು ಅಸ್ಸಾಂ ಸರಕಾರ ಮೂಲಗಳು ತಿಳಿಸಿವೆ. ಸುರಿಯುತ್ತಿರುವ ಭಾರೀ ಮಳೆಯಿಂದ ಅಸ್ಸಾಂನ ಕನಿಷ್ಠ 32 ಜಿಲ್ಲೆಗಳು ಸಂತ್ರಸ್ತವಾಗಿವೆ. ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಬ್ರಹ್ಮಪುತ್ರಾ ನದಿ ಇನ್ನಷ್ಟು ಉಕ್ಕಿ ಹರಿಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News