'ಐಟಾ' ವತಿಯಿಂದ ಬಿ.ಮುಹಮ್ಮದ್ ತುಂಬೆಗೆ ಅಭಿನಂದನೆ

Update: 2019-07-15 13:03 GMT

ಮಂಗಳೂರು: ಜು. 27ರಿಂದ ಆ. 2ರ ತನಕ ಅಮೇರಿಕದ ವರ್ಜೀನಿಯಾದಲ್ಲಿ ನಡೆಯಲಿರುವ ಸ್ಕೌಟ್ಸ್-ಗೈಡ್ಸ್ 24ನೇ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲು ಭಾರತದ ತಂಡದ ಸದಸ್ಯರಾಗಿ ಅಯ್ಕೆಯಾಗಿರುವ ಸುಜೀರು ಪ್ರೌಢ ಶಾಲೆಯ ಶಿಕ್ಷಕ ಬಿ. ಮುಹಮ್ಮದ್ ತುಂಬೆ ಅವರನ್ನು ಅಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ಐಟಾ) ದ.ಕ. ವತಿಯಿಂದ ಸನ್ಮಾನ ಕಾರ್ಯಕ್ರಮವು  ಬದ್ರಿಯಾ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.

ಬದ್ರಿಯಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎನ್. ಇಸ್ಮಾಈಲ್‍ ಅವರು ಬಿ. ಮುಹಮ್ಮದ್ ತುಂಬೆ ಅವರನ್ನು ಸನ್ಮಾನಿಸಿ ಅಭಿನಂದನಾ ಭಾಷಣ ಮಾಡಿದರು.

 ಸಯ್ಯದ್ ಮದನಿ ಉರ್ದು ಹಿ. ಪ್ರಾ. ಶಾಲೆ, ಉಳ್ಳಾಲ ಮುಖ್ಯೋಪಾದ್ಯಾಯ ಕೆ.ಎಂ.ಕೆ. ಮಂಜನಾಡಿ, ಬದ್ರಿಯಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಿ. ಯೂಸುಫ್ ಶುಭ ಹಾರೈಸಿದರು.

ಅಮಾನುಲ್ಲಾಹ್ ಖಾನ್ ಸನ್ಮಾನಿತರ ಪರಿಚಯ ಮಾಡಿದರು. ಯೂಸುಫ್ ಉಸ್ತಾದ್ ಕಿರಾಅತ್ ನೆರವೇರಿಸಿದರು. ಐಟಾ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಮಾಸ್ಟರ್ ಸ್ವಾಗತಿಸಿದರು. ಡಾ. ಮುಹಮ್ಮದ್ ಮುಬೀನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಹ್ಮತುಲ್ಲಾಹ್ , ಇಕ್ಬಾಲ್ ಇನ್ನಿತರ ಐಟಾದ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News