ಕೊಣಾಜೆ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಆರೋಪಿ ಸೆರೆ

Update: 2019-07-15 14:04 GMT

ಕೊಣಾಜೆ: ಪೊಲೀಸ್ ಠಾಣೆ ವ್ಯಾಪ್ತಿಯ ಫ್ಯಾನ್ಸಿ ಅಂಗಡಿಯೊಂದಕ್ಕೆ ಬ್ಯಾಗ್ ಖರೀದಿಸಲು ಬಂದ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇರಳಕಟ್ಟೆಯ ನಿವಾಸಿ ಸಲೀಂ ಝಕರಿಯ (42) ಬಂಧಿತ ಆರೋಪಿ.

ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ರವಿವಾರ ಮುಡಿಪುವಿನ ಫ್ಯಾನ್ಸಿಗೆ ಬಂದು ಬ್ಯಾಗ್ ಖರೀದಿಸಿದ್ದಳೆನ್ನಲಾಗಿದ್ದು, ಸೋಮವಾರ ಬ್ಯಾಗ್ ಬದಲಾಯಿಸಲೆಂದು ಮತ್ತೆ ಫ್ಯಾನ್ಸಿಗೆ ಬಂದಾಗ ಅಂಗಡಿ ಮಾಲಕ ಸಲೀಂ ವಿದ್ಯಾರ್ಥಿನಿಗೆ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಆರೋಪಿಸಿ, ವಿದ್ಯಾರ್ಥಿನಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಳು. ಇದರಂತೆ ಕೊಣಾಜೆ ಪೊಲೀಸರು ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News