ಜು.19ರಂದು ಶಿರೂರು ಸ್ವಾಮೀಜಿ ಸಂಸ್ಮರಣೆ

Update: 2019-07-15 15:13 GMT

ಉಡುಪಿ, ಜು.15: ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥರಾಗಿ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶಿರೂರುಶ್ರೀ ಅಭಿಮಾನಿಗಳು ಶಿರೂರು ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮವನ್ನು ಜು.19ರಂದು ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ವುಕ್ಕಳ ಆಶ್ರಮದಲ್ಲಿ ಆಯೋಜಿಸಿದ್ದಾರೆ.

ಬೆಳಗ್ಗೆ 11:30ಕ್ಕೆ ಕೊಡಂಕೂರು ಪಾಂಡುರಂಗ ಭಜನಾ ಮಂಡಳಿಯ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

ಸಂಸ್ಮರಣೆ ಕಾರ್ಯಕ್ರಮ ದಲ್ಲಿ ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಸ್ಪಂದನ ಶಾಲೆಯ ಮಕ್ಕಳಿಗೆ ಶಿರೂರು ಸ್ವಾಮೀಜಿಗಳ ಹೆಸರಿನಲ್ಲಿ ಅನ್ನದಾನ ಕೂಡ ನಡೆಯಲಿದೆ ಎಂದು ಶಿರೂರು ಸ್ವಾಮೀಜಿ ಅಭಿಮಾನಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News