ಗರ್ಭಪಾತ ಕಾನೂನುಬದ್ಧಗೊಳಿಸಿ: ಮೂವರು ಮಹಿಳೆಯರಿಂದ ಸುಪ್ರೀಂಗೆ ಅರ್ಜಿ

Update: 2019-07-15 15:27 GMT

ಹೊಸದಿಲ್ಲಿ, ಜು.15: ಸಂತಾನೋತ್ಪತ್ತಿಯ ಆಯ್ಕೆ ಮಹಿಳೆಯರಿಗೆ ಇರಬೇಕು ಮತ್ತು ಗರ್ಭಪಾತವನ್ನು ಕಾನೂನುಬದ್ಧಗೊಳಿಸಬೇಕು ಎಂದು ಕೋರಿ ಮೂವರು ಮಹಿಳೆಯರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂಕೋರ್ಟ್ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.

ಸುರಕ್ಷಿತ ಗರ್ಭಪಾತ, ಸಂತಾನೋತ್ಪತ್ತಿಯ ವಿಷಯದಲ್ಲಿ ಮಹಿಳೆಯರಿಗೆ ಇರುವ ಆಯ್ಕೆಯ ಮೇಲೆ ನಿರ್ಬಂಧಗಳು ದೇಶದ ಎಲ್ಲಾ ಮಹಿಳೆಯರ ಮೇಲೆ ತೀವ್ರ ಪರಿಣಾಮ ಬೀರುವ ಕಾರಣ ಬಗ್ಗೆ ತಕ್ಷಣ ನ್ಯಾಯಾಲಯ ಪರಿಶೀಲಿಸಬೇಕು ಎಂದು ಅರ್ಜಿ ಸಲ್ಲಿಸಿರುವ ಮೂವರು ಮಹಿಳೆಯರು ಕೋರಿದ್ದಾರೆ. ಗರ್ಭ ಧರಿಸಬೇಕೇ ಬೇಡವೇ ಎಂಬ ಆಯ್ಕೆಯು ವ್ಯಕ್ತಿಯ ಖಾಸಗಿತನದ, ಘನತೆಯ, ವೈಯಕ್ತಿಕ ಸ್ವಾಯತ್ತತೆಯ, ದೈಹಿಕ ಸಮಗ್ರತೆಯ, ಸ್ವಯಂ ನಿರ್ಣಯದ ಹಾಗೂ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಪರಿಗಣಿಸಿರುವ ಆರೋಗ್ಯದ ಹಕ್ಕಿನಡಿ ಬರುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News