ಟಿಬಿ ಕೇಸ್‌ಗಳಿಗೆ ಸಂಬಂಧಿಸಿ ಕೈಗೊಂಡ ಕ್ರಮಗಳ ಮಾಹಿತಿ ನೀಡಿ: ಹೆಪ್ಸಿಬಾ

Update: 2019-07-15 15:49 GMT

 ಉಡುಪಿ, ಜು.15: ಐಇಸಿ ಸಭೆಯಲ್ಲಿ ಮೊದಲ ದಿನದಿಂದ ಪತ್ತೆ ಹಚ್ಚಲಾದ ಟಿಬಿ ಕೇಸ್‌ಗಳು ಮತ್ತು ಅದರ ಕುರಿತು ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿ. ಕ್ಷಯರೋಗದಿಂದ (ಟಿ.ಬಿ.) ಗುಣಮುಖರಾದವರ ಅನುಭವಗಳನ್ನು ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳ ಕುರಿತು ಅಭಿಪ್ರಾಯದ ವೀಡಿಯೋ ಚಿತ್ರೀಕರಿಸಿ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕ್ಷಯರೋಗ ಫೋರಂ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಕ್ಷಯ ರೋಗ ಕುರಿತು ವಿವರಗಳನ್ನು ನೀಡಿ, ಭಾರತದಲ್ಲಿ ಶೇ.40ರಷ್ಟು ರೋಗಿಗಳಲ್ಲಿ ರುವ ಕ್ಷಯರೋಗವನ್ನು ಪತ್ತೆ ಹಚ್ಚಲಾಗುತ್ತಿಲ್ಲ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ಸಹ ಸಿಗುತ್ತಿಲ್ಲ ಎಂದು ಅಂದಾಜಿಸಲಾಗಿದೆ. ಅಲ್ಲದೇ ರೋಗ ಪತ್ತೆಯಾದವರು ಕೂಡ ವಲಸೆ, ಆರ್ಥಿಕ ಅಡೆತಡೆಗಳು, ಸಾರಿಗೆ ವೆಚ್ಚ, ಖಾಸಗಿ ವಲಯದಲ್ಲಿ ಚಿಕಿತ್ಸೆಗೆ ಹೆಚ್ಚುವರಿ ಖರ್ಚಾಗುವ ಕಾರಣ ಚಿಕಿತ್ಸೆಯನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ. ಕ್ಷಯರೋಗ ಎಂದರೆ ಕೆಲವು ಬಾರಿ ತಾರತಮ್ಯಕ್ಕೆ ಒಳಗಾಗುವ ಭೀತಿಯಿಂದಲೂ ರೋಗದ ಕುರಿತು ಹೇಳಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಕ್ಷಯ ರೋಗದಿಂದ ಬಾಧಿತ ಸಮುದಾಯವನ್ನು ಸದೃಢವಾಗಿಸಲು ಆರ್‌ಎನ್ ಟಿಸಿಪಿ ಕಾರ್ಯಕ್ರಮದ ಮೂಲಕ ಸಮಾಜದ ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 15 ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಇದರ ಮೂಲಕ ಕ್ಷಯರೋಗಿಗಳಿಗಿರುವ ಸಮಸ್ಯೆಗಳು, ಪರಿಣಾಮಗಳು ಕಂಡು ಬಂದಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಖಾಸಗಿ ವಲಯವೂ ಜೊತೆಗೆ ಕೈಗೂಡಿಸಿದರೆ ಉತ್ತಮ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಬಹುದು. ಕ್ಷಯರೋಗದಿಂದ ಗುಣಮುಖರಾದವರನ್ನು ಗುರುತಿಸಿ ಅವರಿಂದ ಪ್ರತಿಕ್ರಿಯೆ ಪಡೆಯಬೇಕು ಎಂದು ಡಾ.ಚಿದಾನಂದ ಸಂಜು ಹೇಳಿದರು.

ಕ್ಷಯರೋಗ ಇರುವವರು ಆಸ್ಪತ್ರೆಗೆ ದಾಖಾಲಾಗುವ ಅವಶ್ಯಕತೆ ಇರುವುದಿಲ್ಲ. ಮೊದಲಿದ್ದ ಸೂಚನೆಗಳಂತೆ ತುಂಬಾ ಗಂಭೀರವಾಗಿದ್ದ ರೋಗಿ ಗಳನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗುವುದು. ಈಗ ತುಂಬಾ ನಿಶ್ಶಕ್ತಿ ಇದ್ದರೆ ಮಾತ್ತ ದಾಖಲು ಮಾಡಿಕೊಳ್ಳಲಾಗುತ್ತದೆ. ಕ್ಷಯರೋಗ ಚಿಕಿತ್ಸೆ ಪಡೆಯುವವರಿಗೆ ಪೋಷಣೆಗಾಗಿ ಮಾಸಿಕ 500 ರೂ.ವ್ನು ಸರಕಾರದಿಂದ ನೀಡಲಾಗುತ್ತಿದೆ.

ಕ್ಷಯರೋಗ ಇರುವವರು ಆಸ್ಪತ್ರೆಗೆ ದಾಖಾಲಾಗುವ ಅವಶ್ಯಕತೆ ಇರುವುದಿಲ್ಲ. ಮೊದಲಿದ್ದ ಸೂಚನೆಗಳಂತೆ ತುಂಬಾ ಗಂಭೀರವಾಗಿದ್ದ ರೋಗಿ ಗಳನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗುವುದು. ಈಗ ತುಂಬಾ ನಿಶ್ಶಕ್ತಿ ಇದ್ದರೆ ಮಾತ್ತ ದಾಖಲು ಮಾಡಿಕೊಳ್ಳಲಾಗುತ್ತದೆ. ಕ್ಷಯರೋಗ ಚಿಕಿತ್ಸೆ ಪಡೆಯುವವರಿಗೆ ಪೋಷಣೆಗಾಗಿ ಮಾಸಿಕ 500 ರೂ.ವನ್ನು ಸರಕಾರದಿಂದ ನೀಡಲಾಗುತ್ತಿದೆ. ಜನವರಿಯಿಂದ ಜೂನ್ 2019ರವರೆಗೆ ಜಿಲ್ಲೆಯ 315 ರೋಗಿಗಳಿಗೆ ಒಟ್ಟು 6,20,000ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿ ಸಲಾಗಿದೆ. ಸಾರ್ವಜನಿಕ ವಲಯದಲ್ಲಿ ಮತ್ತು ಖಾಸಗಿ ವಲಯದಲ್ಲಿ 15 ರೋಗಿಗಳಿಗೆ 25,000 ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಯಲ್ಲಿ 204 ಮಂದಿಯಲ್ಲಿ ಟಿಬಿ ರೋಗ ಕಂಡು ಬರುತ್ತದೆ ಎಂದು ಅಂದಾಜು ಮಾಡಲಾಗಿದೆ. ಜನವರಿಯಿಂದ ಜೂನ್ 2019ರವರೆಗೆ ಸಾರ್ವಜನಿಕ ವಲಯದಲ್ಲಿ 716 ಟಿಬಿ ಕೇಸ್‌ಗಳನ್ನು ಪತ್ತೆ ಹಚ್ಚಲಾಗಿದೆ. ಖಾಸಗಿ ವಲಯದಲ್ಲಿ 341 ಕೇಸ್‌ಗಳನ್ನು ಪತ್ತೆ ಹಚ್ಚಲಾಗಿದ್ದು, ಟಿಬಿ ಇರುವ ರೋಗಿಗಳಿಗೆ ಹೆಚ್‌ಐವಿ ಪರೀಕ್ಷೆಯನ್ನು ಸಾರ್ವಜನಿಕ ವಲಯ ದಲ್ಲಿ 514 ಮಂದಿಗೆ ಹಾಗೂ ಖಾಸಗಿ ವಲಯದಲ್ಲಿ 53 ಮಂದಿಗೆ ಮಾಡಾಗಿದೆ ಎಂದು ಡಾ.ಸಂಜು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News