ಕಜ್ಕೆ: ಜು.16ರಿಂದ ಅರೇಮಾದನಹಳ್ಳಿ ಶ್ರೀಗಳ ಚಾತುರ್ಮಾಸ್ಯ

Update: 2019-07-15 16:15 GMT

ಉಡುಪಿ, ಜು.15: ಶ್ರೀವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಶ್ರೀಶಿವಸುಜ್ಞಾನತೀರ್ಥ ಮಹಾ ಸ್ವಾಮೀಜಿ ಅವರ 37ನೇ ಚಾತುಮಾಸ್ಯ ವೃತಾನುಷ್ಠಾನ ಜು.16ರಿಂದ ಸೆ.14ರವರೆಗೆ ತಾಲೂಕಿನ ಕೊಕ್ಕರ್ಣೆ ಸಮೀಪದ ಕಜ್ಕೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಖಾ ಮಠದಲ್ಲಿ ನಡೆಯಲಿದೆ.

ಕಜ್ಕೆಯಲ್ಲಿ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ದಾನವಾಗಿ ನೀಡಿದ ಎರಡು ಎಕರೆ ಜಾಗದಲ್ಲಿ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಶಾಖಾ ಮಠವನ್ನು 25 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶಾಖಾ ಮಠವನ್ನು ಶ್ರೀವಿಶ್ವಕರ್ಮ ಜಗದ್ಗುರು ಪೀಠ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನದ ಶ್ರೀಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ಸೊೀಮವಾರ ಲೋಕಾರ್ಪಣೆಗೊಳಿಸಿದರು.

ಚಾರ್ತುಮಾಸ್ಯ ವ್ರತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಹರಿದಾಸ ಬಿ.ಸಿ.ರಾವ್ ಶಿವಪುರ ಧಾರ್ಮಿಕ ಉಪನ್ಯಾಸ ನೀಡಿದರೆ, ಕಜ್ಕೆ ಶಾಖಾ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News