ಜು.17ರಂದು ಭಾಗಶಃ ಚಂದ್ರಗ್ರಹಣ

Update: 2019-07-15 16:38 GMT

 ಹೊಸದಿಲ್ಲಿ, ಜು.15: ಭಾಗಶಃ ಚಂದ್ರಗ್ರಹಣಕ್ಕೆ ಭಾರತವು ಜು.17ರಂದು ನಸುಕಿನಲ್ಲಿ ಸಾಕ್ಷಿಯಾಗಲಿದೆ. ಸುಮಾರು ಐದು ಗಂಟೆಗಳಷ್ಟು ಸುದೀರ್ಘ ಅವಧಿಯ ಈ ಗ್ರಹಣವನ್ನು ಖಗೋಳ ಪ್ರಿಯರು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

ಭಾಗಶಃ ಚಂದ್ರಗ್ರಹಣವು ದೇಶಾದ್ಯಂತ ಗೋಚರವಾಗಲಿದೆ. ಏಷ್ಯಾ ಮತ್ತು ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಪ್ರದೇಶಗಳಲ್ಲಿಯೂ ಗ್ರಹಣವನ್ನು ವೀಕ್ಷಿಸಬಹುದಾಗಿದೆ.

ಜುಲೈ 17ರಂದು ನಸುಕಿನ 00:11 ಗಂಟೆಗೆ ಆರಂಭಗೊಳ್ಳುವ ಚಂದ್ರಗ್ರಹಣವು ಬೆಳಗಿನ 5:49ಕ್ಕೆ ಅಂತ್ಯಗೊಳ್ಳಲಿದೆ. ನಸುಕಿನ ಮೂರು ಗಂಟೆಗೆ ಗರಿಷ್ಠ ಗ್ರಹಣವನ್ನು ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News