ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಕಲ್‌ ರಾಜ್ ಮಿಶ್ರಾ ನೇಮಕ

Update: 2019-07-15 16:53 GMT

ಹೊಸದಿಲ್ಲಿ, ಜು.15: ಹಿಮಾಚಲಪ್ರದೇಶದ ರಾಜ್ಯಪಾಲರಾಗಿದ್ದ ಆಚಾರ್ಯ ದೇವವೃತರನ್ನು ವರ್ಗಾಯಿಸಿ ಗುಜರಾತ್‌ನ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಅವರ ಸ್ಥಾನದಲ್ಲಿ ಹಿರಿಯ ಬಿಜೆಪಿ ಮುಖಂಡ ಕಲ್‌ರಾಜ್ ಮಿಶ್ರಾರನ್ನು ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

 2017ರಲ್ಲಿ ನರೇಂದ್ರ ಮೋದಿ ಸರಕಾರದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆಯ ಸಚಿವರಾಗಿದ್ದ ಮಿಶ್ರಾ, ತಮಗೆ 75 ವರ್ಷವಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ತ್ಯಜಿಸಿದ್ದರು. 75 ವರ್ಷ ಮೀರಿದವರು ಚುನಾಯಿತ ಹುದ್ದೆ ನಿರ್ವಹಿಸುವಂತಿಲ್ಲ ಎಂಬ ಅನಧಿಕೃತ ನಿಯಮ ಬಿಜೆಪಿ ಪಕ್ಷದಲ್ಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮಿಶ್ರ ಸ್ಪರ್ಧಿಸಿರಲಿಲ್ಲ. ಮಿಶ್ರ ಹಾಗೂ ದೇವವೃತ ತಮ್ಮ ಹುದ್ದೆ ವಹಿಸಿಕೊಳ್ಳುವ ದಿನದಿಂದ ಅವರ ನೇಮಕಾತಿ ಜಾರಿಗೆ ಬರುತ್ತದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ. ಗುಜರಾತ್‌ನ ರಾಜ್ಯಪಾಲರಾಗಿದ್ದ ಒಪಿ ಕೊಹ್ಲಿ ಸೋಮವಾರ ನಿವೃತ್ತರಾಗಿದ್ದು, ಇವರ ಸ್ಥಾನಕ್ಕೆ ದೇವವೃತರನ್ನು ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News