ಉಳ್ಳಾಲ: ಹಜ್ಜಾಜಿಗಳಿಗೆ ಬೀಳ್ಕೊಡಿಗೆ ಸಮಾರಂಭ

Update: 2019-07-15 17:25 GMT

ಉಳ್ಳಾಲ: ಹಜ್ಜ್ ಯಾತ್ರೆ ಮಾಡುವುದು ಪ್ರವಾದಿ ಅವರಿಗೆ ತುಂಬಾ ಇಷ್ಟವಾದ ಕಾರ್ಯವಾಗಿದೆ ಎಂದು ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ತಿಳಿಸಿದರು.

ಅವರು ಉಳ್ಳಾಲ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಹೊಸಪಳ್ಳಿ ಮೊಹಲ್ಲದಿಂದ ಹಜ್ಜ್ ಯಾತ್ರೆಗೈಯುವ ಹಜ್ಜಾಜ್ ಗಳಿಗೆ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ನಾವು ಮಂಗಳೂರಿನಿಂದ ಬೆಂಗಳೂರಿಗೆ ತಲುಪುವ ಮೊದಲು ಹಜ್ಜ್ ಹಾಜಿಗಳು ಸೌದಿ ಅರೇಬಿಯ ತಲುಪುವಂತಹ  ತಂತ್ರಜ್ಞಾನ ವಿದೆ. ಇಸ್ಲಾಮಿನ ಐದು ಕರ್ಮಗಳಲ್ಲಿ ಕೊನೆಯದ್ದು ಹಜ್ ಯಾತ್ರೆಗೈಯುದಾಗಿದೆ ಎಂದು ಹೇಳಿದರು.

ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯುಸೂಫ್ ಮಿಸ್ಬಾಹಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಹಜ್ಜಾಜಿಗಳಿಗೆ ಶುಭಹಾರೈಸಿದರು.

ಉಳ್ಳಾಲ ನಗರ ಸಭೆ ಸದಸ್ಯರಾದ ಯು.ಎ ಇಸ್ಮಾಯಿಲ್, ಜಬ್ಬಾರ್, ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿಯ ಕಾರ್ಯದರ್ಶಿ ತ್ವಾಹ ಹಾಜಿ, ಜೊತೆ ಕಾರ್ಯದರ್ಶಿ ನೌಷಾದ್ ಅಲಿ, ಸೈಯದ್ ಮದನಿ ಅರಬಿಕ್ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ಅಸೀಫ್ ಅಬ್ದುಲ್ಲಾ, ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಕೊಶಾಧಿಕಾರಿ ಹಮೀದ್ ಕಲ್ಲಾಪ್, ಎಸ್ ಡಿಐ ಮುಖಂಡ ನವಾಝ್ ಉಳ್ಳಾಲ್,  ಮುಹಿಯುದ್ದೀನ್ ಜುಮಾ‌ ಮಸೀದಿ ಯ ಕೊಶಾಧಿಕಾರಿ ರಶೀದ್ ಮುಹಮ್ಮದ್ , ಸದಸ್ಯರಾದ ಹದ್ದಾಮ, ಕಬೀರ್ ಮೋನು, ಸಲೀಂ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News