ತಾಕೋಡೆಯಲ್ಲಿ ಐ.ಸಿ.ವೈ.ಎಂ ನೇಜಿ ನಾಟಿ

Update: 2019-07-15 18:16 GMT

ಮೂಡುಬಿದಿರೆ: ಭಾರತೀಯ ಕಥೋಲಿಕ್ ಯುವ ಸಂಚಲನ ತಾಕೋಡೆ ಘಟಕದಿಂದ ನೇಜಿ ನೆಡುವ ಕಾರ್ಯಕ್ರಮ ತಾಕೋಡೆ ಪರಿಸರದಲ್ಲಿ ನೀಡಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ದಾನ ನೇಜಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಜರು ಭೂಮಿಯಲ್ಲಿ ಕೃಷಿ ಮಾಡಿ ಅದರಿಂದ ಉಪಯೋಗವಾಗುವಂತಾಗಬೇಕು. ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಐ.ಸಿ.ವೈ.ಎಂ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಐ.ಸಿ.ವೈ.ಎಂ ಸದಸ್ಯರಿಗೆ ಬಿಷಪ್ ನೇಜಿ ವಿತರಿಸಿದರು. ಸುಮಾರು 70 ಮಂದಿ ನೇಜಿ ನೆಟ್ಟರು. ಧರ್ಮಾಧ್ಯಕ್ಷರ ಕಾರ್ಯದರ್ಶಿ ವಂ.ರೋಹನ್ ಲೋಬೊ, ತಾಕೋಡೆ ಚರ್ಚಿನ ಧರ್ಮಗುರು ನವೀನ್ ಪ್ರಕಾಶ್ ಡಿ'ಸೋಜ, ಭಗಿನಿಯರಾದ ಪ್ರೆಫಿಲ್ಡಾ, ಮೆಲ್ವಿನ್, ಫಲಿಕ್, ಪ್ರವೀಣ್, ಬೊಲ್ಲೇರು ವಾಳೆಯ ಗುರಿಕಾರ ಪಾವ್ಲ್ ಲೋಬೊ ಉಪಸ್ಥಿತರಿದ್ದರು. ಐಸಿವೈಎಂ ತಾಕೋಡೆ ಘಟಕ ಅಧ್ಯಕ್ಷ ಪ್ರಿನ್ಸನ್ ರೇಗೊ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿತಾ ಫೆರ್ನಾಂಡಿಸ್ ವಂದಿಸಿದರು. ರಾಯನ್ ಪಿಂಟೊ ಕಾರ್ಯಕ್ರಮ ನೀರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News