ವಿಧವೆ, ವಿಕಲಚೇತನ, ಅಸಹಾಯಕ ಮುಸ್ಲಿಂ ಮಹಿಳೆಯರ ಮಾಹಿತಿ ನೀಡಲು ಟಿ.ಆರ್.ಎಫ್ ಮನವಿ

Update: 2019-07-15 18:16 GMT

ಮಂಗಳೂರು: ದ.ಕ ಜಿಲ್ಲೆಯಲ್ಲಿರುವ ವಿಧವೆಯರು, ಗಂಡ ಬಿಟ್ಟು ಹೋದವರು, ದೈಹಿಕ ಮತ್ತು ಮಾನಸಿಕ ವಿಕಲತೆಯುಳ್ಳವರು ಹಾಗೂ ತೀರಾ ಅಸಹಾಯಕರಾಗಿರುವ ಮುಸ್ಲಿಂ ಮಹಿಳೆಯರ ಮಾಹಿತಿಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ ಸಂಗ್ರಹಿಸುತ್ತಿದೆ.

ಆದ್ದರಿಂದ ದ.ಕ ಜಿಲ್ಲೆಯ ಎಲ್ಲಾ ಜಮಾಅತ್ ಕಮಿಟಿಗಳು, ಸಂಘಸಂಸ್ಥೆಗಳು ಅಥವಾ ಜಮಾಅತರು ತಮ್ಮ ಜಮಾಅತಿನಲ್ಲಿರುವ ವಿಧವೆಯರು, ಗಂಡ ಬಿಟ್ಟು ಹೋದವರು, ದೈಹಿಕ ಮತ್ತು ಮಾನಸಿಕ ವಿಕಲತೆಯುಳ್ಳವರು ಹಾಗೂ ತೀರಾ ಅಸಹಾಯಕರಾಗಿರುವ ಮುಸ್ಲಿಂ ಮಹಿಳೆಯರ ಮಾಹಿತಿಯನ್ನು ನೀಡಿ ಸಹಕರಿಸಬೇಕಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಮಾಹಿತಿಯನ್ನು ಅಂಚೆ, ಇ ಮೇಲ್ ಅಥವಾ ವಾಟ್ಸಪ್ ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ-ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ, ಮಂಗಳೂರು-2, ದೂರವಾಣಿ-0824-4267883, ಮೊಬೈಲ್: 9972283365, 9242016836, E mail: trfmangalore@gmail.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News